ಮಂಗಳವಾರ, ಆಗಸ್ಟ್ 3, 2021
26 °C
ಉದ್ಯೋಗ ನಷ್ಟ, ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ವಿರೋಧ

ಜುಲೈ 24ರಿಂದ ಭಾರತೀಯ ಮಜ್ದೂರ್ ಸಂಘದಿಂದ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉದ್ಯೋಗ ನಷ್ಟ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಭಾರತೀಯ ಮಜ್ದೂರ್ ಸಂಘವು (ಆರ್‌ಎಸ್‌ಎಸ್‌ನ ಕಾರ್ಮಿಕ ಸಂಘ) ಜುಲೈ 24ರಿಂದ ಒಂದು ವಾರ ಕಾಲ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. 

ಪ್ರತಿಭಟನೆಯ ಸಮಯದಲ್ಲಿ ಬಿಎಂಎಸ್‌ನ ಕಾರ್ಯಕರ್ತರು ಪ್ರತಿ ವಲಯದ ತಳಮಟ್ಟದ ಕಾರ್ಮಿಕರನ್ನು ಸಂಪರ್ಕಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತ್ತೀಚಿನ ನೀತಿಗಳ ತೀವ್ರ ಪರಿಣಾಮಗಳ ಬಗ್ಗೆ ತಿಳಿವಳಿಕೆ ಮೂಡಿಸಲಿದ್ದಾರೆ. ಪ್ರತಿದಿನವೂ ಒಂದೊಂದು ಘಟಕವು ’ಸರ್ಕಾರ್ ಜಾಗೋ ಸಪ್ತಾಹ’ ನಡೆಸಲಿದೆ ಎಂದು ಬಿಎಂಎಸ್ ಹೇಳಿಕೆಯಲ್ಲಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು