ಭಾನುವಾರ, ಆಗಸ್ಟ್ 14, 2022
24 °C

ವೈದ್ಯಕೀಯ ಸಲಹೆ ಚೀಟಿ ಇಲ್ಲದೆಯೇ ಕೋವಿಡ್‌–19 ಪರೀಕ್ಷೆ ನಡೆಸಿ: ಬಿಎಂಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ವೈದ್ಯಕೀಯ ಸಲಹೆ ಚೀಟಿ ಇಲ್ಲದೆಯೇ ಪ್ರಯೋಗಾಲಯಗಳಲ್ಲಿ ಕೋವಿಡ್‌–19 ಪರೀಕ್ಷೆ ನಡೆಸಬೇಕು ಎಂದು ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸೂಚಿಸಿದೆ.

ಕೋವಿಡ್‌–19 ಪರೀಕ್ಷೆಗೆ ಒಳಪಡುವವರು ಯಾವುದೇ ಸ್ವಯಂ ದೃಢಿಕೃತ ಪತ್ರ ಹಾಗೂ ವೈದ್ಯಕೀಯ ಸಲಹಾ ಚೀಟಿ ಇಲ್ಲದೆಯೇ ಪರೀಕ್ಷೆಗೆ ಒಳಗಾಗಬಹುದು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತನ್ನ ಮಾರ್ಗಸೂಚಿಗಳಲ್ಲಿ ಇದನ್ನು ತಿಳಿಸಿದೆ ಎಂದು ಪಾಲಿಕೆ ಹೇಳಿದೆ.

ತೀವ್ರಗತಿಯಲ್ಲಿ ಕೊರೊನಾ ವೈರಸ್‌ ಹರಡುತ್ತಿರುವುದರಿಂದ ಹೆಚ್ಚು ಹೆಚ್ಚು ಕೋವಿಡ್‌–19 ಪರೀಕ್ಷೆ ನಡೆಸುವ ಸಲುವಾಗಿ ಮುಂಬೈ ಮಹಾನಗರ ಪಾಲಿಕೆ ಈ ಸೂಚನೆ ನೀಡಿದೆ.

ಕೊರೊನಾ ವೈರಸ್‌ ಲಕ್ಷಣಗಳಿರುವವರಿಗೆ ಪ್ರಯೋಗಾಲಯಗಳಲ್ಲಿ ಆರ್‌ಟಿ–ಪಿಸಿಎಂ ಪರೀಕ್ಷೆ ನಡೆಸಬೇಕು ಎಂದು ಪಾಲಿಕೆ ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು