ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Nation update: ನಿಯಂತ್ರಣದಲ್ಲಿದೆಯೇ ಸೋಂಕು?ಒಂದೇ ದಿನ 26,506 ಪ್ರಕರಣ

ಅಕ್ಷರ ಗಾತ್ರ

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್‌–19 ದೃಢಪಟ್ಟ 26,506 ಪ್ರಕರಣಗಳು ದಾಖಲಾಗಿವೆ. ಇದು ಒಂದೇ ದಿನದಲ್ಲಿ ದಾಖಲಾಗಿರುವ ಈವರೆಗಿನ ಅತಿ ಹೆಚ್ಚು ಪ್ರಕರಣವಾಗಿದ್ದು, ಸೋಂಕಿನ ವ್ಯಾಪ್ತಿ ವಿಸ್ತರಿಸುವುದನ್ನು ಗಮನಿಸಬಹುದಾಗಿದೆ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 7,93,802 ತಲುಪಿದೆ. ಕೊರೊನಾ ಸೋಂಕಿನಿಂದ ಒಂದೇ ದಿನ 475 ಮಂದಿ ಸಾವಿಗೀಡಾಗಿದ್ದು, ಈವರೆಗೂ ಕೋವಿಡ್‌ನಿಂದ 21,604 ಮಂದಿ ಮೃತಪಟ್ಟಿದ್ದಾರೆ.

ಪ್ರಸ್ತುತ 2,76,685 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 4,95,513 ಜನ ಗುಣಮುಖರಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಗುಜರಾತ್‌ನಲ್ಲಿ ಒಟ್ಟಾರೆ 39,194 ಜನರಿಗೆ ಸೋಂಕು ತಗುಲಿದೆ. 9,468 ಸಕ್ರಿಯ ಪ್ರಕರಣಗಳಿದ್ದು, 27,718 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 2,008 ಜನರು ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಒಟ್ಟಾರೆ 1,07,051 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 21,567 ಸಕ್ರಿಯ ಪ್ರಕರಣಗಳಿದ್ದು, 82,226 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 3,258 ಮಂದಿ ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ಒಟ್ಟಾರೆ 1,26,581 ಮಂದಿಗೆ ಸೋಂಕು ತಗುಲಿದ್ದು, 46,655 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 78,161 ಮಂದಿ ಗುಣಮುಖರಾಗಿದ್ದು, 1,765 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಒಟ್ಟು 31,105 ಪ್ರಕರಣಗಳು ದಾಖಲಾಗಿದ್ದು, 486 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 17,786 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 12,833 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT