ಭಾನುವಾರ, ಸೆಪ್ಟೆಂಬರ್ 26, 2021
21 °C

ಶ್ರೀರಾಮನ ಆಶೀರ್ವಾದದಿಂದ ಕೋವಿಡ್-19 ಮಾಯವಾಗಬಹುದು: ಶಿವಸೇನಾ

ಪಿಟಿಐ Updated:

ಅಕ್ಷರ ಗಾತ್ರ : | |

Shivsena

ಮುಂಬೈ: ದೇಶದಲ್ಲಿರುವ ಕೋವಿಡ್-19 ಸಂಕಷ್ಟ ಶ್ರೀರಾಮನ ಆಶೀರ್ವಾದದಿಂದ ಮಾಯವಾಗಬಹುದು ಎಂದು ಶಿವಸೇನಾ ಹೇಳಿದೆ. 

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿದ ಭೂಮಿಪೂಜೆ ಬಗ್ಗೆ ಉಲ್ಲೇಖಿಸಿದ್ದು ನರೇಂದ್ರ ಮೋದಿಯವರು ಭೂಮಿ ಪೂಜೆ ಮಾಡುವುದು ಎಂಬುದು ಸುವರ್ಣ ಗಳಿಗೆ. ಇಲ್ಲಿ  ಕೊರೊನಾ ವೈರಸ್ ಇದೆ. ಆದರೆ ಅದು ಶ್ರೀರಾಮನ ಆಶೀರ್ವಾದದಿಂದ ಮಾಯವಾಗಲಿದೆ ಎಂದಿದೆ.

ರಾಮಮಂದಿರ ನಿರ್ಮಾಣಕ್ಕಾಗಿ ಅಭಿಯಾನ ಕೈಗೊಂಡ ನಾಯಕರಾಗಿದ್ದ ಅಡ್ವಾಣಿ ಮತ್ತು  ಜೋಷಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.

ಕೋವಿಡ್ ಹರಡುತ್ತಿರುವ ಈ ಹೊತ್ತಿನಲ್ಲಿ ಈ ನಾಯಕರಿಬ್ಬರ ವಯಸ್ಸು ಪರಿಗಣಿಸಿ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಒಳ್ಳೆಯದು ಎಂದು ಸಲಹೆ ನೀಡಲಾಗಿತ್ತು ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.

ಬಿಜೆಪಿ ನಾಯಕಿ ಉಮಾ ಭಾರತಿ ಅವರು ಸರಯೂ ನದೀತಟದಲ್ಲಿ ಅವರ ಮನಸ್ಸಿನಿಂದಲೇ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ 
ಭೂಮಿಪೂಜೆ ಕಾರ್ಯಕ್ರಮದ ಬಗ್ಗೆ ದೇಶ ಉತ್ಸುಕಗೊಂಡಿದೆ. ಕೊರೊನಾವೈರಸ್ ಅಯೋಧ್ಯೆ, ಉತ್ತರ ಪ್ರದೇಶ ಮತ್ತು  ಇಡೀ ದೇಶದಲ್ಲಿ ವ್ಯಾಪಿಸಿಕೊಂಡಿದೆ. ಈ ಸಂಕಷ್ಟವು ರಾಮನ ಆಶೀರ್ವಾದದಿಂದ ಮಾಯವಾಗಿ ಹೋಗಲಿದೆ ಎಂದು ಶಿವಸೇನಾ ಹೇಳಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು