ಭಾನುವಾರ, ಆಗಸ್ಟ್ 1, 2021
27 °C

ಬಂಡಾಯ ಶಾಸಕರನ್ನು ಹೈಕಮಾಂಡ್ ‌ಕ್ಷಮಿಸಿದರೆ ನಾನು ಒಪ್ಪುವೆ: ಗೆಹ್ಲೋಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಸಲ್ಮೇರ್/ ಜೈಪುರ: ‘ಬಂಡಾಯ ಶಾಸಕರನ್ನು ಹೈಕಮಾಂಡ್‌ ಕ್ಷಮಿಸಿದರೆ, ನಾನು ತಬ್ಬಿಕೊಳ್ಳುವೆ’ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಹೇಳಿದ್ದಾರೆ. 

ಪಕ್ಷದ ನಿಷ್ಠ ಐವತ್ತು ಶಾಸಕರನ್ನು ಸ್ಥಳಾಂತರಿಸಿರುವ ಜೈಸಲ್ಮೇರ್‌ನ ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಿನ್ನಮತೀಯರನ್ನು ಕ್ಷಮಿಸುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಷಯ’ ಎಂದಿದ್ದಾರೆ. 

‘ಬಂಡಾಯ ಶಾಸಕರಿಗೆ ಈಗಲೂ ಪಕ್ಷದ ಬಾಗಿಲು ತೆರೆದಿದೆ. ಅವರು ಸ್ವ ಇಚ್ಛೆಯಿಂದ ಪಕ್ಷಕ್ಕೆ ಮರಳಬಹುದು’ ಎಂದಿದ್ದಾರೆ. 

‘ನಮಗೆ ಯಾರೊಂದಿಗೂ ವೈಯಕ್ತಿಕ ಜಗಳವಿಲ್ಲ. ಪ್ರಜಾಪ್ರಭುತ್ವದಲ್ಲಿ ತತ್ವ ಸಿದ್ಧಾಂತ, ನೀತಿಗಳು ಮತ್ತು ಕಾರ್ಯಕ್ರಮಗಳ ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತದೆ. ಆದರೆ, ಸರ್ಕಾರವನ್ನು ಪತನಗೊಳಿಸಬಾರದು’ ಎಂದಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು