ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್

Last Updated 22 ಜುಲೈ 2020, 16:01 IST
ಅಕ್ಷರ ಗಾತ್ರ

ನವದೆಹಲಿ: ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ವ್ಯಾಪಾರ ಸಂಬಂಧಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕ ಮುಂದಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಬುಧವಾರ ಹೇಳಿದರು.

‘ಇಂಡಿಯಾ ಐಡಿಯಾಸ್‌’ ಅಧಿವೇಶನದ ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿದ ಅವರು, ವ್ಯಾಪಾರಕ್ಕೂ ಮೀರಿದ ಸಂಬಂಧವನ್ನು ಗಟ್ಟಿಗೊಳಿಸುವತ್ತ ಎರಡೂ ದೇಶಗಳು ಯೋಚಿಸುತ್ತಿವೆ. ಜಾಗತಿಕ ಕಾರ್ಯಚೂಚಿಯನ್ನು ರೂಪಿಸಲು ಸಶಕ್ತವಾಗಿವೆ ಎಂದು ತಿಳಿಸಿದರು.

ವಾಣಿಜ್ಯ ಸಂಬಂಧವೂ ಮುಖ್ಯ. ಆದರೂ, ಜ್ಞಾನದ ಕೊಡು–ಕೊಳ್ಳುವಿಕೆ ಮೂಲಕ ಸದೃಢವಾಗಲು ಎರಡೂ ದೇಶಗಳು ಚಿಂತನೆ ನಡೆಸಿವೆ. ವ್ಯಾಪಾರಕ್ಕಿಂತಲೂ ಜ್ಞಾನವನ್ನು ಉನ್ನತೀಕರಿಸುವಲ್ಲಿ ಉತ್ತಮ ಸಂಬಂಧಗಳು ಏರ್ಪಡುತ್ತಿವೆ. ಹಿರಿದಾದ ಉದ್ದೇಶಕ್ಕಾಗಿ ಶಕ್ತಿಯುತ ಸಂಬಂಧ ಸ್ಥಾಪನೆಯು ಮಹತ್ವದ್ದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT