ಮಂಗಳವಾರ, ಆಗಸ್ಟ್ 3, 2021
21 °C

ಜಮ್ಮು ಕಾಶ್ಮೀರ: ಲಷ್ಕರ್‌ ಎ ತಯಬಾ ಉಗ್ರನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಲಷ್ಕರ್‌ ಎ ತಯಬಾ ಸಂಘಟನೆಯ ಉಗ್ರನನ್ನು ಭದ್ರತಾ ಪಡೆ ಶುಕ್ರವಾರ ಬಂಧಿಸಿ, ಆತನಿಂದ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದೆ.

ಹಜೀನ ಪಟ್ಟಣದತ್ತ ಉಗ್ರರ ಸಂಚಾರದ ನಿಖರ ಮಾಹಿತಿ ಮೇರೆಗೆ ಹಕ್ಬಾರ ಪ್ರಾಂತ್ಯದಲ್ಲಿ ನಾಕಾಬಂದಿಯನ್ನು ಹಾಕಲಾಗಿತ್ತು. ತಪಾಸಣೆ ವೇಳೆ ಉಗ್ರ ಗ್ರೆನೇಡ್‌‌ ಎಸೆಯಲು ಪ್ರಯತ್ನಿಸಿದಾಗ ಆತನನ್ನು ಬಂಧಿಸಲಾಗಿದೆ. ಬಂಧಿತನನ್ನು ಚಂದರ್‌ಗೀರ್ ನಿವಾಸಿ ರಫೀಕ್‌ ಅಹ್ಮದ್‌ ರಾತರ್‌ ಅಲಿಯಾಸ್‌ ಹಾಜಿ ಎಂದು ಗುರುತಿಸಲಾಗಿದೆ.

‘ಇತ್ತೀಚೆಗೆ ಲಷ್ಕರ್‌ ಎ ತಯಬಾ ಸಂಘಟನೆಗೆ ಸೇರ್ಪಡೆಯಾದ ರಫೀಕ್‌ ಅಹ್ಮದ್‌ಗೆ ಹಜೀನ ಪ್ರದೇಶದಲ್ಲಿರುವ ಭದ್ರತಾ ಪಡೆಯ ನೆಲೆ ಮೇಲೆ  ದಾಳಿ ನಡೆಸುವ ಕಾರ್ಯ ವಹಿಸಲಾಗಿತ್ತು ಎನ್ನಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.‌

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು