ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಾಲಯ| 32 ವರ್ಷಗಳ ನಂತರ ಮರಳಿ ಶಾಲೆಗೆ, 12ನೇ ತರಗತಿ ಪಾಸಾದ 50ರ ಮಹಿಳೆ

Last Updated 15 ಜುಲೈ 2020, 2:49 IST
ಅಕ್ಷರ ಗಾತ್ರ

ಶಿಲ್ಲಾಂಗ್: ಮೇಘಾಲಯದಲ್ಲಿ 50ರ ಹರೆಯದ ಲೆಕಿಂತ್ಯೂ ಸೈಮ್‌ಲೇ ಎಂಬ ಮಹಿಳೆ 12ನೇ ತರಗತಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.
ರಿಬೋನ್ ಜಿಲ್ಲೆಯಲ್ಲಿರುವ ಬಲಾವನ್ ಕಾಲೇಜಿನ ಅತೀ ಹಿರಿಯ ವಿದ್ಯಾರ್ಥಿಯಾಗಿದ್ದ ಇವರು ಎರಡು ವರ್ಷ ಕಾಲೇಜಿಗೆ ಹಾಜರಾಗಿ ಮೇಘಾಲಯ ಬೋರ್ಡ್ ಎಚ್‌ಎಸ್‌ಎಲ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಕಾಲೇಜಿಗೆ ಬರುವಾಗ ಇತರ ವಿದ್ಯಾರ್ಥಿಗಳಂತೆ ಇವರು ಸಮವಸ್ತ್ರ ಧರಿಸುತ್ತಿದ್ದರು.

ನಾನು ಪಾಸಾಗಿರುವುದು ಖುಷಿ ತಂದಿದೆ. ಗಣಿತ ಕಷ್ಟ, ಅದು ಅರ್ಥವಾಗುವುದಿಲ್ಲ ಎಂಬ ಕಾರಣದಿಂದ ನಾನು 1988ರಲ್ಲಿ ಶಾಲೆಗೆ ಹೋಗುವುದು ನಿಲ್ಲಿಸಿದ್ದೆ. 2008ರಲ್ಲಿ ಪ್ರೀ-ಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿದ ಮೇಲೆ ಮತ್ತೆ ಕಲಿಯಬೇಕು ಎಂಬ ಆಸೆ ಹುಟ್ಟಿಕೊಂಡಿತು ಎಂದು ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಸೈಮ್‌ಲೇ ಹೇಳಿದ್ದಾರೆ.

2015ರಲ್ಲಿ ಇವರು ಇಂದಿರಾಗಾಂಧಿ ವಿಶ್ವವಿದ್ಯಾಲಯದ ದೂರಶಿಕ್ಷಣ ವ್ಯವಸ್ಥೆ ಮೂಲಕ ಮತ್ತೊಮ್ಮೆ ಕಲಿಕೆಯತ್ತ ಹೊರಳಿದ್ದರು.
ಕಲಿಕೆಗೆ ವಯಸ್ಸು ಸಮಸ್ಯೆಯೇ ಅಲ್ಲ. ಅರ್ಧದಲ್ಲಿ ಶಿಕ್ಷಣ ಕೈ ಬಿಟ್ಟವರಿಗೆ ಲೆಕಿತ್ಯೊ ಸೈಮ್‌ಲೇ ಸಾಧನೆ ಸ್ಫೂರ್ತಿದಾಯಕ. ಆಕೆಯ ಪರಿಶ್ರಮಕ್ಕೆ ಅಭಿನಂದನೆಗಳು ಎಂದು ಶಿಕ್ಷಣ ಸಚಿವ ಲೇಕ್‌ಮೆನ್ ರೆಂಬುಯಿ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT