ನವದೆಹಲಿ: ಸಂಸ್ಕೃತ ಭಾಷೆಯನ್ನು ಬಳಸುತ್ತಿರುವವರಿಗೆ, ಅದನ್ನು ಪ್ರೋತ್ಸಾಹಿಸುತ್ತಿರುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿರುವ ಶಿಕ್ಷಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಸಂಸ್ಕೃತ ದಿನಾಚರಣೆ’ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.
ಪ್ರತಿ ವರ್ಷಶ್ರಾವಣ ತಿಂಗಳ ಹುಣ್ಣಿಮೆಯ ದಿನವನ್ನು ಸಂಸ್ಕೃತ ದಿನ ಎಂದು ಆಚರಿಸಲಾಗುತ್ತದೆ. ‘ಸಂಸ್ಕೃತ ಒಂದು ಸುಂದರವಾದ ಭಾಷೆ. ಈ ಭಾಷೆಯು ಭಾರತವನ್ನು ಅದೆಷ್ಟೋ ವರ್ಷಗಳಿಂದ ಜ್ಞಾನದ ಭಂಡಾರವಾಗಿಸಿದೆ. ಸಂಸ್ಕೃತವನ್ನು ಇನ್ನಷ್ಟು ಪ್ರಖ್ಯಾತಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.