ಮಂಗಳವಾರ, ಆಗಸ್ಟ್ 3, 2021
27 °C
ಕೋವಿಡ್-19 ಹಿನ್ನೆಲೆ

ಅಮರನಾಥ ಯಾತ್ರೆಗೆ ಕಡಿವಾಣ ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‍-19 ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಅಮರನಾಥ ಯಾತ್ರೆಗೆ ಕಡಿವಾಣ ಹಾಕುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಯಾತ್ರಿಗಳಿಗೆ ಅನುಮತಿ ನೀಡುವುದು, ನಿಯಂತ್ರಣ ಹೇರುವುದು ಹಾಗೂ ರಕ್ಷಣೆ ನೀಡುವುದು ಪೂರ್ಣವಾಗಿ ಆಡಳಿತಾತ್ಮಕ ವಿಷಯ. ಆಡಳಿತವೇ ಇದನ್ನು ಗಮನಿಸಲಿದೆ ಎಂದು ಹೇಳಿತು.

ಅಮರನಾಥ್‍ ಬರ್ಫಾನಿ ಲಂಗರ್ಸ್‍ ಸಂಸ್ಥೆ ಕೇಂದ್ರಕ್ಕೆ ನಿರ್ದೇಶನ ನೀಡಲು ಕೋರಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ, ಅಂತರ್ಜಾಲ ಮತ್ತು ಟಿ.ವಿಯಲ್ಲಿ ಯಾತ್ರೆಯ ನೇರ ಪ್ರಸಾರಕ್ಕೆ ಕ್ರಮವಹಿಸಲು ನಿರ್ದೇಶಿಸುವಂತೆಯೂ ಅರ್ಜಿದಾರರು ಕೋರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು