ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭಾವ್ಯ ಲಸಿಕೆಯ 2, 3ನೇ ಹಂತದ ಪ್ರಯೋಗಕ್ಕೆ ಅನುಮತಿ ಕೋರಿದ ಸಿಐಐ

ಆಕ್ಸ್ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಸ್ಟ್ರಾಝನೆಕಾದಿಂದ ಉತ್ಪಾದನೆ
Last Updated 25 ಜುಲೈ 2020, 13:54 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ವಿರುದ್ಧದ ಸಂಭಾವ್ಯ ಲಸಿಕೆಯ (ವ್ಯಾಕ್ಸಿನ್‌ ಕ್ಯಾಂಡಿಡೇಟ್‌) 2 ಮತ್ತು 3ನೇ ಹಂತದ ಮಾನವನ ಮೇಲಿನ ಪ್ರಯೋಗಕ್ಕೆ ಅನುಮತಿ ನೀಡುವಂತೆಡ್ರಗ್ಸ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾಕ್ಕೆ (ಡಿಸಿಜಿಐ) ಸೀರಮ್‌ ಇನ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮನವಿ ಸಲ್ಲಿಸಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಸಂಶೋಧಿಸಿರುವ ಈ ಸಂಭಾವ್ಯ ಲಸಿಕೆಯನ್ನು ಅಸ್ಟ್ರಾಝೆನೆಕಾ ಕಂಪನಿ ಸಹಯೋಗದಲ್ಲಿ ಪುಣೆ ಮೂಲದ ಸಿಐಐ ಭಾರತದಲ್ಲಿ ಉತ್ಪಾದಿಸುತ್ತದೆ. ‘ಕೋವಿಡ್‌ಶೀಲ್ಡ್‌’ ಎಂಬುದು ಈ ಸಂಭಾವ್ಯ ಲಸಿಕೆ ಹೆಸರು.

ಕೋವಿಡ್‌ಶೀಲ್ಡ್‌ನ ಕ್ಲಿನಿಕಲ್‌ ಟ್ರಯಲ್‌ಗಾಗಿ 18 ವರ್ಷಕ್ಕೂ ಮೇಲ್ಪಟ್ಟ ವಯೋಮಾನದ 1,600 ಜನ ಆರೋಗ್ಯವಂತ ಭಾರತೀಯರನ್ನು ನೋಂದಾಯಿಸಿಕೊಳ್ಳಲಾಗುವುದು. ಕ್ಲಿನಿಕಲ್‌ ಟ್ರಯಲ್ ಆಗಸ್ಟ್‌ನಲ್ಲಿ ಆರಂಭವಾಗುವುದು ಎಂದು ಮೂಲಗಳು ಹೇಳಿವೆ.

ಬ್ರಿಟನ್‌ನ ಐದು ಸ್ಥಳಗಳಲ್ಲಿ ಈ ಸಂಭಾವ್ಯ ಲಸಿಕೆಯ ಎರಡು ಹಂತದ ಕ್ಲಿನಿಕಲ್‌ ಟ್ರಯಲ್‌ ನಡೆದಿದ್ದು, ಇದು ಸುರಕ್ಷಿತ ಹಾಗೂ ಕೋವಿಡ್‌ ವಿರುದ್ಧ ಹೋರಾಡಲು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

‘ಕೋವಿಡ್‌ಶೀಲ್ಡ್’ನ ಒಂದು ಶತಕೋಟಿ ಡೋಸ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಲಸಿಕೆ ಭಾರತ ಮತ್ತು ಕಡಿಮೆ ಆದಾಯ ಇರುವ ದೇಶಗಳಲ್ಲಿ ಮಾತ್ರ ಬಳಸಲಾಗುವುದು’ ಎಂದು ಸಿಐಐ‌ನ ಸಿಇಒ ಆದರ್‌ ಪೂನಾವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT