ಶನಿವಾರ, ಜನವರಿ 16, 2021
19 °C

ಇಸ್ಲಾಂ ಧರ್ಮ ನಿಂದನೆ: ದುಬೈನಲ್ಲಿ ಮೂವರು ಭಾರತೀಯರ ವಜಾ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಇಸ್ಲಾಂ ಧರ್ಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಟೀಕೆ ಮಾಡಿದ್ದ ಆರೋಪದಲ್ಲಿ ಮೂವರು ಭಾರತೀಯರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. 

ಬಾಣಸಿಗ ರಾವತ್ ರೋಹಿತ್, ಸ್ಟೋರ್‌ ಕೀಪರ್‌ ಸಚಿನ್ ಕಿನ್ನಿಗೋಳಿ ಮತ್ತು ಕ್ಯಾಷಿಯರ್‌ಯೊಬ್ಬರು ಕೆಲಸ ಕಳೆದುಕೊಂಡಿದ್ದಾರೆ. 

ಪ್ರಚೋದನಕಾರಿ ಪೋಸ್ಟ್‌ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಲ್ಫ್‌ ರಾಷ್ಟ್ರದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ. 

‘ಭಾರತ ಮತ್ತು ಯುಎಇ ತಾರತಮ್ಯ ರಹಿತವಾದ ಮೌಲ್ಯಯುತ ಸಂಬಂಧವನ್ನು ಹೊಂದಿವೆ. ತಾರತಮ್ಯವು ನಮ್ಮ ನೈತಿಕ ಚೌಕಟ್ಟು ಮತ್ತು ಕಾನೂನಿನ ನಿಯಮಕ್ಕೆ ವಿರುದ್ಧವಾಗಿದೆ. ಯುಎಇಯಲ್ಲಿರುವ ಭಾರತದ ಪ್ರಜೆಗಳು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ಪವನ್‌ ಕಪೂರ್‌ ಟ್ವೀಟ್‌ ಮಾಡಿದ್ದರು. 

‘ಸಚಿನ್ ಕಿನ್ನಿಗೋಳಿಯ ವೇತನವನ್ನು ತಡೆ ಹಿಡಿದಿದ್ದೇವೆ. ಕೆಲಸಕ್ಕೆ ಬಾರದಂತೆ ತಿಳಿಸಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ. ಇಂತಹ ಅಪರಾಧಗಳನ್ನು ಕ್ಷಮಿಸಲು ಸಾಧ್ಯವಿಲ್ಲ. ಯಾವುದೇ ಧರ್ಮವನ್ನು ಅವಮಾನಿಸಿದರೆ ಅಂಥವರು ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ಶಾರ್ಜಾ ಮೂಲದ ನ್ಯೂಮಿಕ್ಸ್‌ ಆಟೋಮೇಷನ್‌ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು