ಇಬ್ಬರು ಭಾರತೀಯರಿಗೆ ದುಬೈನ ಗೋಲ್ಡ್‌ ಕಾರ್ಡ್‌

ಶುಕ್ರವಾರ, ಜೂಲೈ 19, 2019
23 °C

ಇಬ್ಬರು ಭಾರತೀಯರಿಗೆ ದುಬೈನ ಗೋಲ್ಡ್‌ ಕಾರ್ಡ್‌

Published:
Updated:

ದುಬೈ: ಶಾರ್ಜಾದಲ್ಲಿ ವಾಸವಿರುವ ಭಾರತದ ಉದ್ಯಮಿ ಲಾಲೊ ಸ್ಯಾಮುಯೆಲ್‌ ಅವರಿಗೆ ಅರಬ್‌ ಸಂಯುಕ್ತ ಒಕ್ಕೂಟದ ಶಾಶ್ವತ ನಿವಾಸಿ ಆಗುವ ಅವಕಾಶ ಒದಗಿದೆ. 

ಇದೇ ಮೊದಲ ಬಾರಿಗೆ ವಿದೇಶಿಯೊಬ್ಬರಿಗೆ ಅರಬ್‌ ರಾಷ್ಟ್ರದ ಗೋಲ್ಡ್‌ ಕಾರ್ಡ್‌ ನೀಡಲಾಗಿದೆ. 

ಕಿಂಗ್‌ಸ್ಟಾನ್‌ ಗ್ರೂಪ್‌ನ ಮುಖ್ಯಸ್ಥ ಲಾಲೊ ಅವರಿಗೆ ಶಾರ್ಜಾದ ವಸತಿ ಹಾಗೂ ವಿದೇಶಿ ವ್ಯವಹಾರಗಳ ಮಹಾನಿರ್ದೇಶಕ ಬ್ರಿಗೇಡರ್‌ ಆರಿಫ್‌ ಅಲ್‌ ಶಾಮಿ ಅವರು ಗೋಲ್ಡ್‌ ಕಾರ್ಡ್‌ ನೀಡಿದರು ಎಂದು ಗಲ್ಫ್‌ ನ್ಯೂಸ್‌ ಸೋಮವಾರ ವರದಿ ಮಾಡಿದೆ. 

ಇದರ ಬೆನ್ನಲ್ಲೇ, ಮಲಬಾರ್‌ ಆಭರಣ ಮಳಿಗೆಯ ಸಹ ಅಧ್ಯಕ್ಷ ಹಾಗೂ ಪೇಸ್‌ ಗ್ರೂಪ್‌ನ ಅಧ್ಯಕ್ಷ ಕೇರಳದ ಡಾ. ಪಿ.ಆರ್‌ ಇಬ್ರಾಹಿಂ ಹಾಜಿ ಅವರಿಗೂ ಸೋಮವಾರ ಗೋಲ್ಡ್‌ ಕಾರ್ಡ್‌ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !