ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಹಿಂದೂ ಬಾಲಕಿಯರ ಮತಾಂತರ ತಡೆಗೆ ನಿರ್ಣಯ

Last Updated 17 ಜುಲೈ 2019, 19:16 IST
ಅಕ್ಷರ ಗಾತ್ರ

ಕರಾಚಿ: ಹಿಂದೂ ಬಾಲಕಿಯರ ಬಲವಂತದ ಮತಾಂತರ, ಅಪಹರಣ ತಡೆಯುವುದು ಮತ್ತು ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿರ್ಣಯವನ್ನು ಪಾಕಿಸ್ತಾನದ ಸಿಂಧ್ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ.

ಗ್ರ್ಯಾಂಡ್‌ ಡೆಮಾಕ್ರಟಿಕ್ ಅಲಯನ್ಸ್ (ಜಿಡಿಎ) ಸಂಸದ ನಂದಕುಮಾರ್ ಗೋಕ್ಲಾನಿ ಮಂಡಿಸಿದ ನಿರ್ಣಯಕ್ಕೆ ಆಡಳಿತಾರೂಢ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ, ಮುತ್ತಾಹಿದಾ ಕ್ಯಾಮಿ ಮೂಮೆಂಟ್‌ (ಎಂಒಎಂ), ಪಾಕಿಸ್ತಾನಿ ತೆಹ್ರಿಕ್‌–ಎ–ಇನ್ಸಾಫ್‌ (ಪಿಟಿಐ) ಹಾಗೂ ಜಮಾತ್‌ –ಎ–ಇಸ್ಲಾಮಿ ಪಕ್ಷಗಳು ಬೆಂಬಲ ನೀಡಿದವು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ ವರದಿ ಮಾಡಿದೆ.

ಹಿಂದೂ ಹಾಗೂ ಕ್ರೈಸ್ತ ಸಮುದಾಯದ ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡಿರುವ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸಿಂಧ್‌ ಪ್ರಾಂತ್ಯದಲ್ಲಿಯೇ ಪತ್ತೆಯಾಗಿವೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ ಉಲ್ಲೇಖವಾದ ತಿಂಗಳಲ್ಲಿಯೇ, ಅದನ್ನು ತಡೆಗಟ್ಟಲು ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT