ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲೇಮಾನಿ ಹತ್ಯೆಗೇನು ಕಾರಣ: ಸರಣಿ ಟ್ವೀಟ್‌ನಲ್ಲಿ ನಿಲುವು ಸ್ಪಷ್ಟಪಡಿಸಿದ ಟ್ರಂಪ್

Last Updated 4 ಜನವರಿ 2020, 2:55 IST
ಅಕ್ಷರ ಗಾತ್ರ

‘ಖಾಸಿಂ ಸುಲೇಮಾನಿಯನ್ನು ಇಷ್ಟು ದಿನ ಬದುಕಲು ಬಿಡಬಾರದಿತ್ತು. ಬಹಳ ಹಿಂದೆಯೇ ಕೊಲ್ಲಬೇಕಿತ್ತು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಇರಾಕ್‌ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಸುಕಿನಲ್ಲಿ ಅಮೆರಿಕ ವಾಯುದಾಳಿ ನಡೆಸಿದ ಇರಾನ್‌ನ ಪ್ರಭಾವಿಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಅವರನ್ನು ಕೊಂದುಹಾಕಿತ್ತು. ಈ ಹತ್ಯೆಯ ಕಾರಣಗಳು ಇದಾಗಿರಬಹುದು ಎನ್ನುವ ಮಾರ್ಮಿಕ ಸಂದೇಶಗಳನ್ನು ಟ್ರಂಪ್ ಅವರ ಟ್ವೀಟ್‌ಗಳು ನೀಡಿವೆ.

ಟ್ವೀಟ್‌ ಸರಣಿಯಲ್ಲಿ ‘ಯುದ್ಧಕ್ಕಾಗಿ ಬಂಡವಾಳ ಹೂಡಿದ್ದು ಅಮೆರಿಕ, ಲಾಭವಾಗಿದ್ದು ಮಾತ್ರ ಇರಾನ್‌ಗೆ’ ಎನ್ನುವ ಹತಾಶ ಮನಸ್ಥಿತಿಯ ಭಾವವೂಸಾಲುಗಳ ನಡುವೆ ಓದಿಕೊಂಡಾಗ ಗೋಚರವಾಗುತ್ತದೆ. ‘ಇರಾಕ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಇರಾನ್ ಪ್ರಭಾವ ತಗ್ಗಿಸುವವರೆಗೆ ಅಮೆರಿಕ ವಿರಮಿಸುವುದಿಲ್ಲ’ ಎನ್ನುವ ಸ್ಪಷ್ಟ ಸಂದೇಶವನ್ನೂ ಟ್ರಂಪ್‌ ತಮ್ಮ ಟ್ವೀಟ್‌ಗಳ ಮೂಲಕ ಜಗತ್ತಿಗೆ ನೀಡಿದ್ದಾರೆ.

ಟ್ರಂಪ್‌ ಟ್ವೀಟ್‌ ಸರಣಿಯ ಕನ್ನಡ ಅನುವಾದ ಹೀಗಿದೆ...

‘ಇರಾನ್ ಯಾವ ಯುದ್ಧವನ್ನೂ ಗೆದ್ದಿಲ್ಲ. ಆದರೆಸಂಧಾನದಲ್ಲಿ ಎಂದೂ ಸೋತಿಲ್ಲ. ಎಷ್ಟೋ ಪ್ರತಿಭಟನಾಕಾರರು ಇರಾನ್‌ನಲ್ಲಿ ಸತ್ತಿದ್ದಾರೆ. ಅದರೆ ಇರಾನ್‌ ಅದನ್ನು ಎಂದಿಗೂ ಸರಿಯಾಗಿ ಒಪ್ಪಿಕೊಂಡಿಲ್ಲ. ಸುಲೇಮಾನಿಯನ್ನು ಇರಾನ್‌ ಜನರು ದ್ವೇಷಿಸುತ್ತಿದ್ದರುಮತ್ತು ಭಯಪಡುತ್ತಿದ್ದರು. ಹತ್ಯೆಯಿಂದ ಇರಾನ್‌ನ ಜನರಿಗೆ ಅಷ್ಟೇನೂ ಬೇಸರವಾಗಿಲ್ಲ. ಅಲ್ಲಿನ ನಾಯಕರು ಹೊರಜಗತ್ತಿಗೆ ಸುಳ್ಳುಹೇಳುತ್ತಿದ್ದಾರೆ.

‘ಸುಲೇಮಾನಿಯನ್ನು ಎಂದೋ ಮುಗಿಸಿಬಿಡಬೇಕಿತ್ತು! ಹಲವು ವರ್ಷಗಳಿಂದ ಎಷ್ಟೋ ಅಮೆರಿಕರನ್ನು ಸುಲೇಮಾನಿ ಕೊಂದಿದ್ದ. ಸಾವಿರಾರು ಅಮೆರಿಕನ್ನರು ಗಂಭೀರವಾಗಿ ಗಾಯಗೊಳ್ಳಲು ಕಾರಣನಾಗಿದ್ದ. ಇನ್ನಷ್ಟು ಜನರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದ. ಅದರೆ, ಅಷ್ಟರಲ್ಲಿ ಸಿಕ್ಕಿಬಿದ್ದ! ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರ ಸಾವಿಗೆ ಸುಲೇಮಾನಿ ಕಾರಣನಾಗಿದ್ದಾನೆ.

‘ಇರಾಕ್‌ಗಾಗಿ ಅಮೆರಿಕ ಸಾಕಷ್ಟು ಮಾಡಿದೆ. ಇದೆಲ್ಲದರ ಜೊತೆಗೆಕಳೆದ ಹಲವು ವರ್ಷಗಳಿಂದಪ್ರತಿ ವರ್ಷವೂ ಲಕ್ಷಾಂತರ ಡಾಲರ್ ನೆರವು ನೀಡುತ್ತಿದೆ. ಇರಾನ್‌ನ ನಿಯಂತ್ರಣ ಮತ್ತು ಮೇಲುಗೈ ಇರುವ ವಾತಾವರಣದಲ್ಲಿ ಬದುಕುವುದು ಇರಾಕ್ ಜನರಿಗೆ ಇಷ್ಟವಿಲ್ಲ. ಆದರೆ ಕೊನೆಗೆ ಇದು ಇರಾಕ್‌ ಜನರ ಇಷ್ಟಕ್ಕೆ ಬಿಟ್ಟಿದ್ದು.

‘ಕಳೆದ 15 ವರ್ಷಗಳಲ್ಲಿ ಇರಾನ್‌ಗೆ ಸಾಕಷ್ಟು ಲಾಭವಾಗಿದೆ. ಇರಾಕ್ ಮೇಲಿನ ಹಿಡಿತವನ್ನೂ ಇರಾನ್ ಹೆಚ್ಚಿಸಿಕೊಂಡಿದೆ. ಇರಾಕ್‌ನ ಜನರಿಗೆ ಇದರಿಂದ ಸಂತಸವೇನೂ ಆಗಿಲ್ಲ. ಇದರ ಅಂತ್ಯ ಎಂದಿಗೂ ಚೆನ್ನಾಗಿರಲ್ಲ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT