ಭಾನುವಾರ, ಮಾರ್ಚ್ 29, 2020
19 °C

ನೈಜೀರಿಯಾ: ದರೋಡೆಕೋರರ ಗುಂಡಿಗೆ 30 ಬಲಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕಾನೊ(ನೈಜೀರಿಯಾ): ನೈಜೀರಿಯಾದಲ್ಲಿ ಬಂದೂಕುದಾರಿಗಳ ಗುಂಡಿಗೆ 30 ಮಂದಿ ಬಲಿಯಾಗಿದ್ದು ಈ ಕೃತ್ಯವನ್ನು ದನಕರುಗಳ ಕಳ್ಳರು ಮತ್ತು ಅಪಹರಣಕಾರರು ಎಸಗಿದ್ದಾರೆ ಎಂದು ಪೊಲೀಸರು ಭಾನುವಾರ ಇಲ್ಲಿ ತಿಳಿಸಿದರು. 

ಕಾಟ್ಸಿನದ ತ್ಸೌವಾ ಮತ್ತು ದಂಕಾರ್‌ ಹಳ್ಳಿಗಳ ಮೇಲೆ ದರೋಡೆಕೋರರು ದಾಳಿ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆ ತ್ಸೌವಾದ 21 ಮಂದಿ ಹಾಗೂ ದಂಕಾರ್‌ನ 9 ಮಂದಿ ಮೃತಪಟ್ಟರು ಎಂದು ಕಾಟ್ಸಿನದ ಪೊಲೀಸ್ ವಕ್ತಾರ ಗ್ಯಾಂಬೊ ಇಸಾಹ್‌ ಹೇಳಿದರು. 

ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್‌ ಬುಹಾರಿ ಅವರ ರಾಜ್ಯವಾದ ಕಾಟ್ಸಿನದ ಮೇಲೆ ‌ದನಕರುಗಳ ಕಳ್ಳರು, ಅಪಹರಣಕಾರರು ಪದೇ ಪದೇ ದಾಳಿ ನಡೆಸುತ್ತಿದ್ದಾರೆ. 
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು