ಗುರುವಾರ , ಜುಲೈ 29, 2021
21 °C
ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಪತ್ತೆ

ಬೀಜಿಂಗ್‌ನ 11 ವಸತಿ ಪ್ರದೇಶ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌ (ಪಿಟಿಐ): ವಿದೇಶದಿಂದ ಬಂದವರಲ್ಲದೇ, ದೇಶದೊಳಗೇ ಪ್ರಸರಣಗೊಂಡಿರುವ ಆರು ಹೊಸ ಕೋವಿಡ್‌–19 ಪ್ರಕರಣಗಳು ಪತ್ತೆಯಾದ ಕಾರಣ, ಬೀಜಿಂಗ್‌ನಲ್ಲಿ ಆರು ಪ್ರಮುಖ ಮಾರುಕಟ್ಟೆಗಳು ಮತ್ತು ಮಾರುಕಟ್ಟೆ ಸಮೀಪದ 11 ವಸತಿ ಸಮುದಾಯಗಳನ್ನು ಲಾಕ್‌ಡೌನ್ ಮಾಡಲಾಗಿದೆ. 

ಬೀಜಿಂಗ್‌ನಲ್ಲಿ ಪತ್ತೆಯಾದ 6 ಪ್ರಕರಣಗಳು ಸೇರಿದಂತೆ ದೇಶದಲ್ಲಿ ಶುಕ್ರವಾರ ಒಟ್ಟು 18 ಹೊಸ ಪ್ರಕರಣ ಗಳು ಪತ್ತೆಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಶನಿವಾರ ತಿಳಿಸಿದೆ.

ಶುಕ್ರವಾರ, ಲಕ್ಷಣರಹಿತ 7 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು 98 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಕ್ಸಿನ್‌ಫಾಡಿ ಮಾರುಕಟ್ಟೆಯಲ್ಲಿ ಆಮದು ಮಾಡಿಕೊಳ್ಳಲಾಗುವ ಸಾಲ್ಮನ್ ಮೀನುಗಳನ್ನು ಕತ್ತರಿಸುವ ಚಾಪಿಂಗ್ ಬೋರ್ಡ್‌ನಲ್ಲಿ ಕೊರೊನಾ ವೈರಸ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿನ 9 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿಗಳು ನೆಗೆಟಿವ್‌ ಬಂದಿದೆ. ಎಂದು ಕ್ಸಿನ್‌ಫಾಡಿ ಮಾರುಕಟ್ಟೆಯ ಮುಖ್ಯಸ್ಥ ಜಾಂಗ್ ಯಕ್ಸಿ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು