ಮಂಗಳವಾರ, ಸೆಪ್ಟೆಂಬರ್ 24, 2019
29 °C

ಕಾಶ್ಮೀರ ವಿಚಾರದಲ್ಲಿ ಅಮೆರಿಕ ಧೈರ್ಯದಿಂದ ಮಾತನಾಡಲಿ: ಬರ್ನಿ ಸ್ಯಾಂಡರ್ಸ್

Published:
Updated:
Prajavani

ಹ್ಯೂಸ್ಟನ್: ’ಕಾಶ್ಮೀರ ವಿಚಾರದಲ್ಲಿ ಅಮೆರಿಕ ಸರ್ಕಾರ ಧೈರ್ಯದಿಂದ ಮಾತ ನಾಡಬೇಕು’ ಎಂದು ಸೆನೆಟರ್‌ ಮತ್ತು ಡೆಮಾಕ್ರೆಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಬರ್ನಿ ಸ್ಯಾಂಡರ್ಸ್ ಹೇಳಿದ್ದಾರೆ.

ಉತ್ತರ ಅಮೆರಿಕದ ಇಸ್ಲಾಮಿಕ್ ಸೊಸೈಟಿ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಶ್ಮೀರ ಸಮಸ್ಯೆ ಪರಿಹಾರಕ್ಕಾಗಿ ವಿಶ್ವಸಂಸ್ಥೆ ಬೆಂಬಲಿತ ಶಾಂತಿ ನಿರ್ಣಯಗಳಿಗೆ ಅಮೆರಿಕ ಬೆಂಬಲ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಕಾಶ್ಮೀರದಲ್ಲಿ ಸಂವಹನಕ್ಕೆ ತಡೆಯೊಡ್ಡಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದೂ 77 ವರ್ಷದ ಸ್ಯಾಂಡರ್ಸ್ ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಭಾರತದ ನಡೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

Post Comments (+)