ಗುರುವಾರ , ಏಪ್ರಿಲ್ 9, 2020
19 °C

ಕೆನಡಾ ಪ್ರಧಾನಮಂತ್ರಿ ಪತ್ನಿಗೂ ತಗುಲಿದ ಕೋವಿಡ್-19 ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಟ್ಟಾವ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಅವರ ಕಚೇರಿ ಗುರುವಾರ ತಡವಾಗಿ ತಿಳಿಸಿದೆ.

ಸೋಫಿ ಗ್ರೆಗೊರಿ ಟ್ರುಡೊ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

'ವೈದ್ಯಕೀಯ ಸಲಹೆ ಮೇರೆಗೆ ಅವರು ಸದ್ಯಕ್ಕೆ ಪ್ರತ್ಯೇಕವಾಗಿರುತ್ತಾರೆ. ಅವರು ಚೆನ್ನಾಗಿಯೇ ಇದ್ದಾರೆ. ವೈದ್ಯರು ಶಿಫಾರಸು ಮಾಡಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಮತ್ತು ಸೋಂಕು ಪೀಡಿತ ಲಕ್ಷಣಗಳು ಮಂದಗತಿಯಲ್ಲಿವೆ ಎಂದು ಹೇಳಿದೆ. 

ಇದನ್ನೂ ಓದಿ: 

'ಪ್ರಧಾನಮಂತ್ರಿಯವರಲ್ಲಿ ರೋಗದ ಯಾವುದೇ ಗುಣಲಕ್ಷಣ ಕಂಡುಬಂದಿಲ್ಲ. ಅವರು ಆರೋಗ್ಯವಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ವೈದ್ಯರ ಸಲಹೆ ಮೇರೆಗೆ ಅವರು 14 ದಿನಗಳು ಪತ್ನಿಯಿಂದ ದೂರವಿರುವುದಾಗಿಯೂ ಪ್ರಕಟಿಸಿದ್ದಾರೆ. ಆದರೆ ಪರೀಕ್ಷೆಗೆ ಒಳಗಾಗುವುದಿಲ್ಲ.' 'ಪ್ರಧಾನಮಂತ್ರಿಗಳು ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ಮುಂದುವರಿಸುತ್ತಾರೆ ಮತ್ತು ನಾಳೆ ಕೆನಡಿಯನ್ನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.' ಎಂದು ತಿಳಿಸಿದೆ.

ಟ್ರೂಡೊ ಮತ್ತು ಅವರ ಪತ್ನಿ ಬುಧವಾರ ಬ್ರಿಟನ್‌ನಿಂದ ಹಿಂತಿರುಗಿದಾಗಿನಿಂದ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ವೇಳೆ ಪತ್ನಿಯು ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಒಳಗಾದ ಬಳಿಕ ಸ್ವಯಂ ಆಗಿ ಪರಸ್ಪರ ದೂರವಿರುವುದಾಗಿ ಗುರುವಾರವೇ ಘೋಷಿಸಿದ್ದರು.

ಬ್ರಿಟನ್‌ನಿಂದ ಹಿಂದಿರುಗಿದ ನಂತರ ಸೋಫಿ ಗ್ರೆಗೊರಿ ಟ್ರುಡೊ ಅವರಿಗೆ, ' ತಡರಾತ್ರಿಯೇ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಕೂಡಲೇ ಅವರು ವೈದ್ಯಕೀಯ ಸಲಹೆ ಮತ್ತು ಪರೀಕ್ಷೆಗೆ ಒಳಗಾಗಿದ್ದರು ಎಂದು ಮೊದಲ ಹೇಳಿಕೆಯಲ್ಲಿ ತಿಳಿಸಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು