ಸೋಮವಾರ, ಮಾರ್ಚ್ 30, 2020
19 °C

ಹಾಲಿವುಡ್ ದಿಗ್ಗಜ ಟಾಮ್‌ಹಂಕ್ಸ್‌ಗೆ ಕೋವಿಡ್‌ ತಗುಲಿದ್ದು ಕೇಳಿ ಟ್ವಿಟರ್ ಲೋಕ ಮರುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಫಾರೆಸ್ಟ್‌ ಗಂಪ್‌,’ ‘ಕಾಸ್ಟ್‌ ಅವೇ’, ‘ಸೇವಿಂಗ್‌ ಪ್ರೈವೇಟ್‌ ರಿಯಾನ್’ ಚಿತ್ರ ಖ್ಯಾತಿಯ, ಬಾಲಿವುಡ್‌ನ ದಿಗ್ಗಜ ಟಾಮ್‌ ಹಂಕ್ಸ್‌ ಮತ್ತು ಅವರ ಪತ್ನಿ ರೀಟಾ ವಿಲ್ಸನ್‌ ಅವರಿಗೆ ಕೋವಿಡ್‌ 19 ಸೋಂಕು ತಗುಲಿದ್ದು ಕೇಳಿ ನೆಟ್‌ ಲೋಕ ದಿಗ್ಭ್ರಾಂತಿಗೊಂಡಿದೆ. 

ಸ್ವತಃ ಟಾಮ್‌ ಹಂಕ್ಸ್‌ ಅವರೇ ತಮಗೆ ಕೊರೋನಾ ವೈರಸ್‌ ತಗುಲಿರುವುದಾಗಿ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದರೂ, ಅವರ ಅಭಿಮಾನಿಗಳು ನಂಬಲು ಸಿದ್ಧರಿಲ್ಲ. ಭಾವೋದ್ವೇಗಕ್ಕೆ ಒಳಗಾಗಿರುವ ಅಭಿಮಾನಿ ಬಳಗ ‘ಇಲ್ಲ.. ಅದು ಟಾಮ್‌ ಹಂಕ್ಸ್‌ ಅಲ್ಲ,’  ‘ಟಾಮ್ಸ್‌ ಹಂಕ್ಸ್‌ಗೆ ಏನೂ ಆಗಿಲ್ಲ’ ‘ಟಾಮ್‌ ಹಂಕ್ಸ್‌ ಬದಲಿಗೆ ನನಗೆ ಬರಲಿ,’ ಎಂದೆಲ್ಲ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. 

ಟಾಮ್‌ ಹಂಕ್ಸ್‌ ಪೋಸ್ಟ್‌ನಲ್ಲಿ ಏನಿದೆ? 

ನಾವು ಸಿನಿಮಾ ಶೂಟಿಂಗ್‌ಗಾಗಿ ಆಸ್ಟ್ರೇಲಿಯಾಕ್ಕೆ ಬಂದಿದ್ದೇವೆ. ನನಗೂ ಮತ್ತು ರೀಟಾಗೂ ಮೈಕೈ ನೋವು, ಶೀತ, ನೆಗಡಿ, ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ವೈದ್ಯರನ್ನು ಸಂಪರ್ಕಿಸಿದೆವು. ಅವರು ನಮ್ಮ ರಕ್ತ ಮತ್ತು ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ವರದಿಯಲ್ಲಿ ಕೋವಿಡ್‌–19 ಪಾಸಿಟಿವ್‌ ಬಂದಿದೆ ಎಂದು ತಿಳಿಸಿದ್ದಾರೆ.

ಮುಂದೆ ವೈದ್ಯರು ಸಲಹೆ ಸೂಚನೆಗಳನ್ನು ಪಾಲಿಸುತ್ತ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಮತ್ತೆ ನಿಮಗೆ ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡುವೆ, ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಕಸದ ಬುಟ್ಟಿಯಲ್ಲಿ ಶಸ್ತ್ರಚಿಕಿತ್ಸೆಯ ಕೈಗವಸನ್ನು ಎಸೆದಿರುವ ಚಿತ್ರ ಹಾಕಿ ಪೋಸ್ಟ್‌ ಮಾಡಿದ್ದಾರೆ.

ಮರುಗಿದ ಟ್ವಿಟರ್‌ ಲೋಕ 

ಹಾಲಿವುಡ್‌ನ ಜನಪ್ರಿಯ ನಟ ಟಾಮ್‌ ಹಂಕ್ಸ್‌ಗೆ ಕೋವಿಡ್‌ ತಗುಲಿದ್ದು ಕೇಳಿ ದಿಗ್ಭ್ರಾಂತರಾಗಿರುವ ಟ್ವಿಟರ್‌ ಮಂದಿ, ಭಾವೋದ್ವೇಗದಿಂದ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು