ಸೋಮವಾರ, ಜೂಲೈ 13, 2020
28 °C

ಗಡಿಯಲ್ಲಿ ಪಾಲಕರಿಂದ ಬೇರ್ಪಟ್ಟ ಮಕ್ಕಳ ಸಂಖ್ಯೆ 5,400!

ಎಪಿ Updated:

ಅಕ್ಷರ ಗಾತ್ರ : | |

ಸ್ಯಾಂಡಿಯಾಗೊ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತಾವಧಿಯ ಪ್ರಾರಂಭಿಕ ದಿನಗಳಲ್ಲಿ ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ವಲಸೆ ಪ್ರಾಧಿಕಾರದ ಅಧಿಕಾರಿಗಳು 1,500ಕ್ಕೂ ಅಧಿಕ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಮೆರಿಕನ್‌ ಸಿವಿಲ್‌ ಲಿಬರ್ಟೀಸ್‌ ಒಕ್ಕೂಟ(ಎಸಿಎಲ್‌ಯು) ತಿಳಿಸಿದೆ. 

2017 ಜುಲೈನಿಂದ ಇಲ್ಲಿಯವರೆಗೂ ಪಾಲಕರಿಂದ ಬೇರ್ಪಟ್ಟ ಮಕ್ಕಳ ಸಂಖ್ಯೆ 5,400ಕ್ಕೆ ಏರಿಕೆಯಾಗಿದೆ ಎಂದು ಒಕ್ಕೂಟ ತಿಳಿಸಿದೆ. ಸರ್ಕಾರದ ವಶದಲ್ಲಿರುವ ಮಕ್ಕಳನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಎಸಿಎಲ್‌ಯು ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ‘2017 ಜುಲೈ 1ರಿಂದ 2018 ಜೂನ್‌ 26ರವರೆಗೆ 1,556 ಮಕ್ಕಳು ಪಾಲಕರಿಂದ ಬೇರ್ಪಟ್ಟಿದ್ದು, ಈ ಪೈಕಿ 5 ವರ್ಷಕ್ಕಿಂತ ಕೆಳಗಿನ 207 ಮಕ್ಕಳಿದ್ದರು’ ಎಂದು ಟ್ರಂಪ್‌ ಆಡಳಿತ ನ್ಯಾಯಾಲಯದಲ್ಲಿ ಮಾಹಿತಿ ನೀಡಿತ್ತು.

‘207 ಮಕ್ಕಳ ಪೈಕಿ ಒಂದು ವರ್ಷಕ್ಕಿಂತ ಕೆಳಗಿನ ಐದು ಮಕ್ಕಳು, ಒಂದು ವರ್ಷದ 26 ಮಕ್ಕಳಿದ್ದವು’ ಎಂದು ಎಸಿಎಲ್‌ಯುನ ವಕೀಲರಾದ ಲೀ ಗೆಲರ್ನ್ಟ್‌ ತಿಳಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮಕ್ಕಳನ್ನು ವಾಪಸ್‌ ಪಾಲಕರ ಸುಪರ್ದಿಗೆ ಒಪ್ಪಿಸಬೇಕು ಎಂದು ಆದೇಶಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು