ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಈ ವರ್ಷ ಜಿಡಿಪಿ ಗುರಿ ಇಲ್ಲ

Last Updated 22 ಮೇ 2020, 21:28 IST
ಅಕ್ಷರ ಗಾತ್ರ

ಬೀಜಿಂಗ್‌ : ಕೋವಿಡ್‌–19 ಹಿನ್ನೆಲೆಯಲ್ಲಿ ವಿಳಂಬ ವಾಗಿದ್ದ ಚೀನಾದ ವಾರ್ಷಿಕ ಸಂಸತ್‌ ಅಧಿವೇಶನ ಶುಕ್ರವಾರ ಆರಂಭವಾಗಿದೆ.

‘ಕೊರೊನಾ ಪಿಡುಗಿನಿಂದಾಗಿ ಚೀನಾ ಹಾಗೂ ವಿಶ್ವದ ಆರ್ಥಿಕತೆ ಕುಸಿದಿದ್ದು, ಅಂತರರಾಷ್ಟ್ರೀಯ ವ್ಯಾಪಾರ ಇಳಿಕೆಯಾಗಿರುವುದರಿಂದ ಸರ್ಕಾರಈ ವರ್ಷ ಯಾವುದೇ ಆರ್ಥಿಕ ವೃದ್ಧಿ ದರದ (ಜಿಡಿಪಿ) ಗುರಿ ಇರಿಸಿಲ್ಲ’ ಎಂದು ಚೀನಾ ಪ್ರಧಾನಿ ಲಿ ಕೆಚಾಂಗ್‌ ತಿಳಿಸಿದರು.

‘ಕೊರೊನಾ ಸಂದರ್ಭದಲ್ಲಿ ಮುಂದಿನ ಬೆಳವಣಿಗೆಗಳನ್ನು ಊಹಿಸಲು ಕಷ್ಟ. ಹೀಗಾಗಿ ಜಿಡಿಪಿ ಗುರಿ ಇರಿಸಿಲ್ಲ.2018ಕ್ಕೆ ಹೋಲಿಸಿದರೆ 2019ರಲ್ಲಿ ಜಿಡಿಪಿ ಶೇ 6.1ರಷ್ಟು ಹೆಚ್ಚಾಗಿದೆ.1.35 ಕೋಟಿ ಉದ್ಯೋಗ ಸೃಷ್ಟಿಯಾಗಿದ್ದು, ನಿರುದ್ಯೋಗ ಪ್ರಮಾಣ ಶೇ 5.3ರ ಕೆಳಗಿದಿದೆ’ ಎಂದರು.

ಕೊರೊನಾ ಸೋಂಕಿನ ಕಾರಣ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಅಧಿವೇಶನವನ್ನು ಮುಂದೂಡಲಾಗಿತ್ತು. ಶುಕ್ರವಾರಭಾರಿ ಭದ್ರತೆಯ ನಡುವೆ ಗ್ರೇಟ್‌ ಹಾಲ್‌ ಆಫ್‌ ಪೀಪಲ್‌ನಲ್ಲಿ 2,900ಕ್ಕೂ ಅಧಿಕ ಸದಸ್ಯರು ಅಧಿ ವೇಶನದಲ್ಲಿ ಭಾಗವಹಿಸಿದರು. ಎಲ್ಲ ಸದಸ್ಯರು ಕೋವಿಡ್‌–19 ಪರೀಕ್ಷೆಗೆ ಒಳಪಟ್ಟು ಸಭಾಂಗಣವನ್ನು ಪ್ರವೇಶಿಸಿದರು. ಅಧಿವೇಶನದಲ್ಲಿ ಸೋಂಕಿನಿಂದ ಮೃತಪಟ್ಟ ಜನರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT