ಸೋಮವಾರ, ಜೂಲೈ 6, 2020
23 °C

ಕೋವಿಡ್‌ | ವುಹಾನ್‌ನಲ್ಲಿ ಯಾವುದೇ ಹೊಸ ಪ್ರಕರಣ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿದ್ದ ವುಹಾನ್‌ ನಗರದಲ್ಲಿ ಇತ್ತೀಚೆಗೆ ಯಾವುದೇ ರೋಗಲಕ್ಷಣ ಇಲ್ಲದೆಯೇ ಹಲವರಲ್ಲಿ ಸೋಂಕು ಇರುವ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿದ್ದವು. ಆದ್ದರಿಂದ ಸರ್ಕಾರವು ಕಳೆದ ಕೆಲವು ವಾರಗಳಲ್ಲಿ 90 ಲಕ್ಷ ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಿತ್ತು. ಆದರೆ, ಇದೇ ಮೊದಲ ಬಾರಿಗೆ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಭಾನುವಾರ ವಿಹಾನ್‌ ನಗರದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಿತ್ತು. ಎಲ್ಲ ವರದಿಗಳು ನೆಗೆಟಿವ್‌ ಬಂದಿವೆ ಎಂದು ವುಹಾನ್‌ ಆರೋಗ್ಯ ಆಯೋಗ ಹೇಳಿದೆ ಎಂದು ‘ಗ್ಲೋಬಲ್‌ ಟೈಮ್‌’ ವರದಿ ಮಾಡಿದೆ. ನಗರದಲ್ಲಿ, ಹೆಚ್ಚು ಹೆಚ್ಚು ಸೋಂಕು ಪರೀಕ್ಷೆ ನಡೆಸುತ್ತಿರುವುದು ಮತ್ತು ಉಷ್ಣಾಂಷ ತಪಾಸಣೆ ನಡೆಸುತ್ತಿರುವುದೇ, ಸೋಂಕು ಹರಡುವಿಕೆಗೆ ತಡೆಯೊಡ್ಡಿದೆ ಎಂದು ಆಯೋಗ ಹೇಳಿದೆ.

ಯಾವುದೇ ರೋಗ ಲಕ್ಷಣ ಕಾಣಿಸಿಕೊಳ್ಳದೆಯೂ ಸೋಂಕು ಹೊಂದಿರುವ ಪ್ರಕರಣಗಳು ಚೀನಾ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಆದ್ದರಿಂದ, ಕಳೆದ ಒಂದು ತಿಂಗಳಲ್ಲಿ ದೇಶದಲ್ಲಿ 1.12 ಕೋಟಿ ಅಷ್ಟು ಮಂದಿಯನ್ನು ಸರ್ಕಾರ ಪರೀಕ್ಷೆಗೆ ಒಳಪಡಿಸಿದೆ.

ವಿದೇಶದಿಂದ ಬಂದ ಐವರಲ್ಲಿ ಹಾಗೂ ರೋಗಲಕ್ಷಣ ಇಲ್ಲದೇ 10 ಮಂದಿಯಲ್ಲಿ ಸೋಂಕು ಇರುವುದು ಸೋಮವಾರ ವರದಿಯಾಗಿದೆ. ಇಲ್ಲಿಯವ ವರೆಗೂ ದೇಶದಲ್ಲಿ 15 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

ರೋಗಲಕ್ಷಣ ಇಲ್ಲದೆಯೇ ಸೋಂಕು ಇರುವ ಒಟ್ಟು 371 ಮಂದಿ ಹಾಗೂ ವಿದೇಶದಿಂದ ಬಂದ 39 ಮಂದಿಯನ್ನು ವೈದ್ಯಕೀಯ ವೀಕ್ಷಣೆಯಲ್ಲಿ ಇರಿಸಲಾಗಿದೆ. ಜತೆಗೆ, ವುಹಾನ್‌ನಲ್ಲಿ 320 ಮಂದಿ ಸೋಂಕಿತರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು