ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಹೊಸ FDI ನೀತಿಗೆ ಚೀನಾ ಆಕ್ರೋಶ

Last Updated 20 ಏಪ್ರಿಲ್ 2020, 10:12 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯ ನೀತಿಯನ್ನು ಬಿಗಿಗೊಳಿಸಿರುವ ಭಾರತದ ಹೊಸ ನಿಯಮಗಳು ವಿಶ್ವ ವ್ಯಾಪಾರ ಒಕ್ಕೂಟದ ತಾರತಮ್ಯ ರಹಿತ ಮತ್ತು ಮುಕ್ತ ಮತ್ತು ನ್ಯಾಯೋಚಿತ ವ್ಯಾಪಾರದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸೋಮವಾರ ಚೀನಾ ತಿಳಿಸಿದೆ.

ಭಾರತದ ಜತೆಗೆ ಗಡಿಯನ್ನು ಹಂಚಿ­ಕೊಂಡಿರುವ ನೆರೆಹೊರೆಯ ಎಲ್ಲ ರಾಷ್ಟ್ರಗಳು ಭಾರತದಲ್ಲಿ ನೇರ ಅಥವಾ ಪರೋಕ್ಷ ಹೂಡಿಕೆಗೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಈ ಬದಲಾವಣೆಗಳು "ಅವಕಾಶವಾದಿ ಸ್ವಾಧೀನಗಳನ್ನು" ನಿಗ್ರಹಿಸಲು ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಚೀನಾವನ್ನು ಉಲ್ಲೇಖಿಸಿರಲಿಲ್ಲ.

'ಚೀನಾದ ಹೂಡಿಕೆದಾರರ ಮೇಲೆ ಭಾರತದ ಈ ನೀತಿಯ ಪರಿಣಾಮ ಬೀರುವುದು ಸ್ಪಷ್ಟವಾಗಿದೆ' ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರ ಜಿ ರೊಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತವು 'ತಾರತಮ್ಯದ ನಿಯಮಗಳನ್ನು' ಪರಿಷ್ಕರಿಸುತ್ತದೆ ಮತ್ತು ವಿವಿಧ ದೇಶಗಳ ಹೂಡಿಕೆಗಳನ್ನು ಸಮಾನವಾಗಿ ಪರಿಗಣಿಸುತ್ತದೆ ಎಂದು ಚೀನಾ ಆಶಿಸುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಹಿಂದೆ ಭಾರತ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ನೀತಿಯನ್ನು ಸಡಿಲಗೊಳಿಸಿತ್ತು. 2017ರಲ್ಲಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಪಡಿಸಲಾಗಿತ್ತು. ಸ್ವಯಂಚಾಲಿತ ವ್ಯವಸ್ಥೆ ಅಡಿಯಲ್ಲಿ ವಿದೇಶಿ ಹೂಡಿಕೆಗೆ ಕೇಂದ್ರ ಸರಕಾರ, ಆರ್‌ಬಿಐನ ಪೂರ್ವಾನುಮತಿಯ ಅಗತ್ಯ ಇರ­ಲಿಲ್ಲ. ಈ ಹಿಂದೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮೂಲದ ಹೂಡಿಕೆಗೆ ಮಾತ್ರ ಹೆಚ್ಚಿನ ನಿರ್ಬಂಧಗಳು ಇರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT