ಮಂಗಳವಾರ, ನವೆಂಬರ್ 19, 2019
29 °C
ಷು ಕ್ವಿಂಗ್‌

ನೇಪಾಳ ಪ್ರವಾಸೋದ್ಯಮ ಚೀನಾದ ನಟಿ ರಾಯಭಾರಿ

Published:
Updated:
Prajavani

ಕಠ್ಮಂಡು: ಪ್ರವಾಸೋದ್ಯಮ ರಾಯಭಾರಿಯಾಗಿ ಚೀನಾ ನಟಿ ಷು ಕ್ವಿಂಗ್‌ ಅವರನ್ನು ನೇಪಾಳ ಸರ್ಕಾರ ಶನಿವಾರ ನೇಮಕ ಮಾಡಿದೆ.

ಪ್ರವಾಸೋದ್ಯಮ ಸಚಿವ ಯೋಗೇಶ್‌ ಭಟ್ಟರಾಯ್‌ ಅವರು ಕಾರ್ಯಕ್ರಮವೊಂದರಲ್ಲಿ ಕ್ವಿಂಗ್‌ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. 

‘ನೇಪಾಳಕ್ಕೆ ಭೇಟಿ ಕೊಡಲು ಉತ್ಸುಕಳಾಗಿದ್ದೇನೆ. ಬುದ್ಧ ಜನಿಸಿದ ನಾಡಿನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ನೇಪಾಳದ ಪ್ರವಾಸೋದ್ಯಮದ ಉತ್ತೇಜನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಕ್ವಿಂಗ್‌ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)