ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಮತ್ತೆ 86 ಮಂದಿ ಸಾವು

ಚೀನಾ ಸಹಿತ ಸಂತ್ರಸ್ತ ರಾಷ್ಟ್ರಗಳಿಗೆ ₹ 715 ಕೋಟಿ ನೆರವು ಘೋಷಿಸಿದ ಅಮೆರಿಕ
Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಶನಿವಾರ 86 ಮಂದಿ ಮೃತಪಟ್ಟಿರುವ ವರದಿಯಾಗಿದ್ದು, ಇದರಿಂದಾಗಿ ಸೋಂಕಿನಿಂದ ಈ ತನಕ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 723ಕ್ಕೆ ತಲುಪಿದೆ.

‘ಅಮೆರಿಕದ 60 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ವುಹಾನ್‌ನಲ್ಲಿ ಇದೇ 6ರಂದು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ’ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿ ವಕ್ತಾರರು ತಿಳಿಸಿದ್ದಾರೆ.

ವುಹಾನ್‌ನ ಆಸ್ಪತ್ರೆಯಲ್ಲಿ ನ್ಯುಮೋನಿಯಾ ಚಿಕಿತ್ಸೆಗೆ ದಾಖಲಾಗಿದ್ದ ಜಪಾನ್‌ನ ವ್ಯಕ್ತಿ ಮೃತಪಟ್ಟಿದ್ದಾರೆ. ಇವರಿಗೆ ಕೊರೊನಾ ಸೋಂಕು ತಗುಲಿತ್ತು ಎನ್ನುವ ಶಂಕೆ ಇದೆ. ಆದರೆ ದೃಢಪಡಿಸಲು ಸಾಧ್ಯವಾಗಿಲ್ಲದ ಕಾರಣ ಸಾವಿಗೆ ನ್ಯುಮೋನಿಯಾ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಶನಿವಾರ ಹೊಸದಾಗಿ 3,399 ಜನರಲ್ಲಿ ಸೋಂಕು ದೃಢಪಟ್ಟಿರುವ ವರದಿಯಾಗಿದೆ’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಮೃತಪಟ್ಟ 86 ಜನರಲ್ಲಿ 81 ಮಂದಿ ಹ್ಯುಬೆ ಪ್ರಾಂತ್ಯದವರು. ಹೈಲಾಂಗ್ಜಿಯಾಂಗ್‌ನಲ್ಲಿ ಇಬ್ಬರು, ಬೀಜಿಂಗ್, ಹೆನನ್‌ ಹಾಗೂ ಗನ್ಸುನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಜಗತ್ತಿನೆಲ್ಲೆಡೆ ಮುಖಗವುಸು ಹಾಗೂ ಇತರೆ ರಕ್ಷಣಾ ಉಪಕರಣಗಳ ಕೊರತೆ ಉಂಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರಾಸ್ ಅದನಾಂ ಹೇಳಿದ್ದಾರೆ.

₹ 715 ಕೋಟಿ ನೆರವು ಘೋಷಿಸಿದ ಅಮೆರಿಕ (ವಾಷಿಂಗ್ಟನ್): ಕೊರೊನಾ ವೈರಸ್ ಸೋಂಕಿನ ತಡೆಗೆ ಕ್ರಮ ಕೈಗೊಳ್ಳಲು ಚೀನಾ ಹಾಗೂ ಇತರೆ ದೇಶಗಳಿಗೆ ₹ 715 ಕೋಟಿ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.

ಹಡಗಿನಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ (ಟೋಕಿಯೊ,ಎಎಫ್‌ಪಿ): ಜಪಾನ್‌ನ ಯೊಕೊಹಾಮಾ ಬಂದರಿನಲ್ಲಿರುವ ಡೈಮಂಡ್‌ ಪ್ರಿನ್ಸೆಸ್ ಹಡಗಿನಲ್ಲಿ ಶನಿವಾರ ಹೊಸದಾಗಿ ಮೂವರಲ್ಲಿ ಪ್ರಯಾಣಿಕರಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ.

ಇದರಿಂದಾಗಿ ಈವರೆಗೆ ಸೋಂಕು ತಗುಲಿರುವ ಪ್ರಯಾಣಿಕರ ಸಂಖ್ಯೆ 64ಕ್ಕೆ ತಲುಪಿದೆ.

ಸೋಂಕಿತರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಹಡಗಿನಲ್ಲಿ ಇರುವವರಲ್ಲಿ ಬಹುತೇಕರು ಹಿರಿಯ ವಯಸ್ಸಿನವರಾಗಿದ್ದು ಸೋಂಕಿಗೆ ಗುರಿಯಾಗುವ ಅಪಾಅ‍ಯ ಹೆಚ್ಚಿದೆ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.

ವೈರಸ್ ಕುರಿತು ಅಧ್ಯಯನ

ಬರ್ಲಿನ್: ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕು ಹೇಗೆ ಹರಡುತ್ತದೆ ಎನ್ನುವ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

‘ಹಾಸ್ಪಿಟಲ್ ಇನ್ಫೆಕ್ಷನ್’ ಎನ್ನುವ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಈ ಸಂಶೋಧನಾ ವರದಿಯಲ್ಲಿ ಕೊರೊನಾ ವೈರಸ್ ಹಾಗೂ ಅದನ್ನು ನಿಷ್ಕ್ರಿಯಗೊಳಿಸುವ ಕುರಿತು ನಡೆದ 22 ಅಧ್ಯಯನಗಳ ಸಮಗ್ರ ವರದಿ ಇದೆ.

‘ಈ ವೈರಸ್‌ ಆಸ್ಪತ್ರೆಯ ಬಾಗಿಲ ಹಿಡಿಕೆಗಳು, ಹಾಸಿಗೆ ಬದಿಯ ಟೇಬಲ್‌ಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಉಳಿದುಕೊಂಡು, ಕೋಣೆಯ ತಾಪಮಾನದಲ್ಲಿ 9 ದಿನಗಳವರೆಗೂ ಸಕ್ರಿಯವಾಗಿದ್ದು, ಸೋಂಕು ಹರಡಬಲ್ಲ ಸಾಮರ್ಥ್ಯ ಹೊಂದಿವೆ. ಹಾಗಾಗಿ ಇಂತಹ ವಸ್ತುಗಳ ಮೇಲೆ ರೋಗ ನಿರೋಧಕ ಔಷಧಗಳನ್ನು ಸಿಂಪಡಿಸುವುದು ಉತ್ತಮ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಕಡಿಮೆ ಉಷ್ಣಾಂಶ ಹಾಗೂ ಗಾಳಿಯಲ್ಲಿ ಹೆಚ್ಚು ತೇವಾಂಶ ಇದ್ದಾಗ ಈ ವೈರಸ್‌ಗಳ ಜೀವಿತಾವಧಿ ಮತ್ತಷ್ಟು ಹೆಚ್ಚುತ್ತದೆ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಗುಂಟರ್ ಕಂಫ್ ತಿಳಿಸಿದ್ದಾರೆ.

ಹಡಗಿನಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆ

ಟೋಕಿಯೊ: ಜಪಾನ್‌ನ ಯೊಕೊಹಾಮಾ ಬಂದರಿನಲ್ಲಿರುವ ಡೈಮಂಡ್‌ ಪ್ರಿನ್ಸೆಸ್ ಹಡಗಿನಲ್ಲಿ ಶನಿವಾರ ಹೊಸದಾಗಿ ಮೂವರಲ್ಲಿ ಪ್ರಯಾಣಿಕರಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ.

ಇದರಿಂದಾಗಿ ಈವರೆಗೆ ಸೋಂಕು ತಗುಲಿರುವ ಪ್ರಯಾಣಿಕರ ಸಂಖ್ಯೆ 64ಕ್ಕೆ ತಲುಪಿದೆ.

ಸೋಂಕಿತರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಹಡಗಿನಲ್ಲಿ ಇರುವವರಲ್ಲಿ ಬಹುತೇಕರು ಹಿರಿಯ ವಯಸ್ಸಿನವರಾಗಿದ್ದು ಸೋಂಕಿಗೆ ಗುರಿಯಾಗುವ ಅ‍ಪಾಯ ಹೆಚ್ಚಿದೆ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.

**

* 34,598 – ಚೀನಾದಲ್ಲಿ ಈವರೆಗೆ ಸೋಂಕು ದೃಢಪಟ್ಟ ಪ್ರಕರಣಗಳು

* 34,800 – ಜಗತ್ತಿನೆಲ್ಲೆಡೆ ಸೋಂಕಿಗೆ ಗುರಿಯಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT