ಶನಿವಾರ, ಮೇ 30, 2020
27 °C

Covid-19 World Update: ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 113 ಮಂದಿ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ರಷ್ಯಾದಲ್ಲಿ ಶುಕ್ರವಾರ 10598 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 262843ಕ್ಕೇರಿದೆ. ಕಳೆದ  24 ಗಂಟೆಗಳಲ್ಲಿ ರಷ್ಯಾದಲ್ಲಿ 113 ಮಂದಿ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 2418ಕ್ಕೇರಿದೆ. 

ಚೀನಾದಲ್ಲಿ 15 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ 11 ಮಂದಿಗೆ ರೋಗ ಲಕ್ಷಣಗಳು ಇರಲಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದೀಗ ಪ್ರಕರಣಗಳ ಸಂಖ್ಯೆ 82,933ಕ್ಕೇರಿದೆ.

ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ಸೆಂಟರ್ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ 4483864 ಮಂದಿಗೆ ಕೊರೊನಾ ಸೋಂಕು ತಗುಲಿದೆ, ಅಮೆರಿಕದಲ್ಲಿ 1,420,299 , ರಷ್ಯಾ- 262843,ಬ್ರಿಟನ್ -238001 ಪ್ರಕರಣಗಳು ಪತ್ತೆಯಾಗಿವೆ. 

ಇಲ್ಲಿಯವರೆಗೆ 303825 ಮಂದಿ ಕೋವಿಡ್-19 ರೋಗದಿಂದ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ-85922, ಬ್ರಿಟನ್‌ನಲ್ಲಿ 34077 ಮತ್ತು ಇಟಲಿಯಲ್ಲಿ 32368 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಒಂದೇ ದಿನ 1,602, ದೆಹಲಿಯಲ್ಲಿ 472 ಸೋಂಕು ಪ್ರಕರಣ

ಜಾಗತಿಕವಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿವೆ. ಕಳೆದ 24 ಗಂಟೆಗಳಲ್ಲಿ ಅಮೆರಿಕ ಒಂದರಲ್ಲೇ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 1,703ಕ್ಕೆ ಏರಿದ್ದು, ಒಟ್ಟು ಸಾವಿನ ಸಂಖ್ಯೆ 86,900 ತಲುಪಿದೆ. 

ಸ್ಪೇನ್‌ನಲ್ಲಿ 27,321 , ಇಟಲಿಯಲ್ಲಿ 31,368 , ಇಂಗ್ಲೆಂಡ್‌ನಲ್ಲಿ 33,614, ಪ್ರಾನ್ಸ್‌ನಲ್ಲಿ 27,425 ಜನರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು