ಗುರುವಾರ , ಜೂಲೈ 2, 2020
28 °C

ನ್ಯೂಜಿಲೆಂಡ್ ಮೊದಲ‌ ಕೊರೊನಾ ಮುಕ್ತ ದೇಶ!

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಆಕ್ಲೆಂಡ್‌: ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್‌, ಸದ್ಯ ಹಲವು ದೇಶಗಳಲ್ಲಿ ಏರುಗತಿಯಲ್ಲಿದೆ. ಆದರೆ, ನ್ಯೂಜಿಲೆಂಡ್‌ ಕೋವಿಡ್‌ ವಿರುದ್ಧ ವಿಜಯ ಸಾಧಿಸಿದೆ. 

ನ್ಯೂಜಿಲೆಂಡ್‌ನಲ್ಲಿ ಈಗ ಕೇವಲ ಒಂದೇ ಒಂದು ಸಕ್ರಿಯ ಕೋವಿಡ್‌ ಪ್ರಕರಣ ಮಾತ್ರ ಬಾಕಿ ಉಳಿದಿದೆ. ರೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಕಳೆದ 8 ದಿನಗಳಿಂದ ಅಲ್ಲಿ ಒಂದೇ ಒಂದು ಹೊಸ ಪ್ರಕರಣವೂ ಪತ್ತೆಯಾಗಿಲ್ಲ. ಹೀಗಿದ್ದರೂ, ಕೋವಿಡ್‌ ಮೇಲೆ ಹದ್ದಿನ ಕಣ್ಣಿಟ್ಟಿರುವ ನ್ಯೂಜಿಲೆಂಡ್‌, ಪರೀಕ್ಷೆಗಳನ್ನು ಮಾತ್ರ ನಿರಂತರವಾಗಿ ಕೈಗೊಂಡಿದೆ. 

ನ್ಯೂಜಿಲೆಂಡ್‌ನಲ್ಲಿ ಈ ವರೆಗೆ 1504 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 1481 ಮಂದಿ ಗುಣಮುಖರಾಗಿದ್ದು, 22 ಮಂದಿ ಸಾವಿಗೀಡಾಗಿದ್ದಾರೆ. ಒಬ್ಬರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಈ 8 ದಿನಗಳಲ್ಲಿ ಅಲ್ಲಿ ಒಂದೂ ಸಾವು ಸಂಭವಿಸಿಲ್ಲ. ಒಬ್ಬರೂ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಅಲ್ಲಿನ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. 

ಸೋಂಕು ಪ್ರಕರಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ಕೋವಿಡ್‌ ನಿಯಂತ್ರಣಾ ಕ್ರಮಗಳನ್ನು ಸಡಿಲಗೊಳಿಸಲು ಮುಂದಾಗಿದೆ. 

ನ್ಯೂಜಿಲೆಂಡ್‌ನಲ್ಲಿ ಈ ವರೆಗೆ 2,78,872 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈಗಲೂ ಪರೀಕ್ಷೆಗಳು ವ್ಯಾಪಕವಾಗಿ ನಡೆಯುತ್ತಿವೆ. 

ಫೆ.28ರಂದು ಅಲ್ಲಿ ಮೊದಲ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾಗಿತ್ತು. ಮಾರ್ಚ್‌ 19ರಂದು ದೇಶಲ್ಲಿ ಗಡಿಗಳನ್ನು ಮುಚ್ಚಲಾಗಿತ್ತು. ಮಾರ್ಚ್‌ 26ರಿಂದ ಸಂಪೂರ್ಣ ಲಾಕ್‌ಡೌನ್‌ ಜಾರಿಗೆ ತಂದಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು