ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌: ಶನಿವಾರ 86 ಸಾವು, ಮೃತರ ಸಂಖ್ಯೆ 723ಕ್ಕೆ ಏರಿಕೆ

Last Updated 8 ಫೆಬ್ರುವರಿ 2020, 12:35 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಶನಿವಾರ 86 ಮಂದಿ ಮೃತಪಟ್ಟಿರುವ ವರದಿಯಾಗಿದ್ದು, ಇದರಿಂದಾಗಿ ಸೋಂಕಿನಿಂದ ಈ ತನಕ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 723ಕ್ಕೆ ತಲುಪಿದೆ.

ಶಂಕಿತ ಸೋಂಕಿನಿಂದ ಸಾವಿಗೀಡಾದವರಲ್ಲಿ ಇದೇ ಮೊದಲಿಗೆ ಇಬ್ಬರು ವಿದೇಶಿಯರು ಸೇರಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

‘ಅಮೆರಿಕದ 60 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ವುಹಾನ್‌ನಲ್ಲಿ ಇದೇ 6ರಂದು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ’ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿ ವಕ್ತಾರ ತಿಳಿಸಿದ್ದಾರೆ.

ವುಹಾನ್‌ನ ಆಸ್ಪತ್ರೆಯಲ್ಲಿ ನ್ಯುಮೋನಿಯಾ ಚಿಕಿತ್ಸೆಗೆ ದಾಖಲಾಗಿದ್ದ ಜಪಾನ್‌ನ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ಇವರಿಗೆ ಕೊರೊನಾ ಸೋಂಕು ತಗುಲಿತ್ತು ಎನ್ನುವ ಶಂಕೆ ಇದೆ. ಆದರೆ ದೃಢಪಡಿಸಲು ಸಾಧ್ಯವಾಗಿಲ್ಲದ ಕಾರಣ ಸಾವಿಗೆ ನ್ಯುಮೋನಿಯಾ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಶನಿವಾರ ಹೊಸದಾಗಿ 3,399 ಜನರಲ್ಲಿ ಸೋಂಕು ದೃಢಪಟ್ಟಿರುವ ವರದಿಯಾಗಿದೆ’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ಮೃತಪಟ್ಟ 86ರ ಜನರಲ್ಲಿ 81 ಮಂದಿ ಹ್ಯುಬೆ ಪ್ರಾಂತ್ಯದವರು. ಹೈಲಾಂಗ್ಜಿಯಾಂಗ್‌ನಲ್ಲಿ ಇಬ್ಬರು, ಬೀಜಿಂಗ್, ಹೆನನ್‌ ಹಾಗೂ ಗನ್ಸುನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ವಿದೇಶಗಳಲ್ಲಿ 220 ಸಾವು: ವಿದೇಶಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 220ಕ್ಕೆ ಏರಿಕೆಯಾಗಿದೆ.

ಜಗತ್ತಿನೆಲ್ಲೆಡೆ ಮುಖಗವುಸು ಹಾಗೂ ಇತರೆ ರಕ್ಷಣಾ ಉಪಕರಣಗಳ ಕೊರತೆ ಉಂಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರಾಸ್ ಅದನಾಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT