ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಾಜ್‌ ಷರೀಫ್ ಆರೋಗ್ಯದಲ್ಲಿ ತೀವ್ರ ಏರುಪೇರು: ಡಿಸ್ಚಾರ್ಜ್‌ಗೆ ವೈದ್ಯರ ನಿರಾಕರಣೆ

Last Updated 29 ಅಕ್ಟೋಬರ್ 2019, 5:37 IST
ಅಕ್ಷರ ಗಾತ್ರ

ಲಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ಷರೀಫ್ಅವರ ಆರೋಗ್ಯ ತೀವ್ರ ಹದಗೆಟ್ಟಿದೆ.ರಕ್ತದಲ್ಲಿನ ಬಿಳಿರಕ್ತಕಣಗಳ ಸಂಖ್ಯೆಯು(ಪ್ಲೇಟ್‌ಲೆಟ್‌) ನಿರಂತವಾಗಿಕುಸಿಯುತ್ತಿರುವುದರಿಂದ, ಅವರಿಗೆ ನೀಡಲಾಗುತ್ತಿದ್ದಹೃದಯ ಸಂಬಂಧಿಚಿಕಿತ್ಸೆಯನ್ನತಾ‌ತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮಾಧ್ಯಮಗಳುವರದಿಮಾಡಿದೆ

69 ಪ್ರಾಯದನವಾಜ್ಶರೀಫ್ಅವರ ಪ್ಲೇಟ್‌ಲೇಟ್‌ಗಳ ಸಂಖ್ಯೆಯು ಒಂದೇ ದಿನದಲ್ಲಿ 45,000ದಿಂದ25,000ಕ್ಕೆ ಕುಸಿದಿದ್ದು, ಅರೋಗ್ಯ ಪರಿಸ್ಥಿತಿ ವಿಷಮಗೊಳ್ಳುತ್ತಿದೆ ಎಂದುತಿಳಿದುಬಂದಿದೆ

ಪ್ಲೇಟ್‌ಲೆಟ್‌ಗಳ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದ ಹಿನ್ನೆಲೆಯಲ್ಲಿಸೋಮವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಎದುರಾಗಿದೆ.ರಕ್ತ ಸಂಚಾರದಲ್ಲಿ ತೀವ್ರಏರಿಳಿತ ಉಂಟಾಗಿದೆ. ಆದರೆ, ಪ್ಲೇಟ್‌ಲೆಟ್‌ಗಳ ಸಂಖ್ಯೆ ನಿರಂತರವಾಗಿ ಕುಸಿಯುತ್ತಿರುವುದರಿಂದ ಹೃದಯ ಚಿಕಿತ್ಸೆಯನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಷರೀಫ್‌ ಅವರನ್ನುಆಸ್ಪತ್ರೆಯಿಂದ ಬಿಡುಗಡೆ ಮಾಡಲುವೈದ್ಯರು ನಿರಾರಿಸಿರುವುದರಿಂದ ಆವರ ಆರೋಗ್ಯದ ಕುರಿತು ಮತ್ತಷ್ಟು ಅನುಮಾನಗಳು ಮೂಡುವಂತೆ ಮಾಡಿದೆ.

ಹಣದ ಅಕ್ರಮ ವರ್ಗಾವಣೆ ಆರೋಪದಡಿಜೈಲು ವಾಸ ಅನುಭವಿಸುತ್ತಿದ್ದ ಷರೀಫ್‌ಗೆ ಮೂರು ದಿನಗಳ ಹಿಂದಷ್ಟೇ ಅನಾರೋಗ್ಯದ ಕಾರಣಕ್ಕೆ ಜಾಮೀನು ಸಿಕ್ಕಿತ್ತು.ಅಲ್‌–ಅಜೀಜ್‌ ಸ್ಟೀಲ್‌ಮಿಲ್ಸ್ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ಅವರಿಗೆ2018ರ ಡಿಸೆಂಬರ್‌ನಲ್ಲಿನ್ಯಾಯಾಲಯ 7 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT