ಶನಿವಾರ, ಮೇ 30, 2020
27 °C

ನೆರವನ್ನು ಎಂದಿಗೂ ಮರೆಯುವುದಿಲ್ಲ, ‘ಥ್ಯಾಂಕ್ ಯು’ ಭಾರತ: ಟ್ರಂಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಡ್ರಾಕ್ಸಿಕ್ಲೋರೋಕ್ವಿನ್‌ ಪೂರೈಕೆ ನಿರ್ಧಾರ ಕೈಗೊಂಡ ಭಾರತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಭಿನಂಧಿಸಿದ್ದಾರೆ. 
ಭಾರತದ ಈ ನಿರ್ಧಾರವನ್ನು ಎಂದಿಗೂ ಮರೆಯುವುದಿಲ್ಲ ಎಂದೂ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. 

‘ಸ್ನೇಹಿತರು ಅಸಾಮಾನ್ಯ ಸಂದರ್ಭಗಳಲ್ಲಿ ಇನ್ನಷ್ಟು ಹೆಚ್ಚು ನಿಕಟವಾಗಿ ಸಹಕಾರ ನೀಡಬೇಕಾಗುತ್ತದೆ. ಹೈಡ್ರೋಕ್ಲೋರಿಕ್ವಿನ್‌ ಪೂರೈಕೆ ವಿಚಾರದಲ್ಲಿ ನಿರ್ಧಾರ ಕೈಗೊಂಡ ಭಾರತ ಮತ್ತು ಭಾರತದ ನಾಗರಿಕರಿಗೆ ಧನ್ಯವಾದಗಳು. ಇದನ್ನು ಎಂದಿಗೂ ಮರೆಯುವುದಿಲ್ಲ.  ನೆರವಿಗಾಗಿ ಭಾರತದ ಪ್ರಧಾನಿಗೆ ಧನ್ಯವಾದಗಳು. ಅವರ ಸದೃಢ ನಾಯಕತ್ವ ಭಾರತಕ್ಕಷ್ಟೇ ನೆರವಾಗುತ್ತಿಲ್ಲ. ಮಾನವೀಯ ಹೋರಾಟಕ್ಕೂ ಅವರು ನೆರವಾಗಿದ್ದಾರೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಟ್ರಂಪ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಡೊನಾಲ್ಡ್‌ ಟ್ರಂಪ್‌ ಅವರ ಮಾತುಗಳನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಇಂಥ ಸಂದರ್ಭಗಳು ಸ್ನೇಹಿತರನ್ನು ಹತ್ತಿರಕ್ಕೆ ತರುತ್ತವೆ. ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಎಂದಿಗಿಂತಲೂ ಈಗ ಸದೃಢವಾಗಿದೆ. ಕೊವಿಡ್‌–19 ವಿರುದ್ಧದ ಮಾನವೀಯ ಹೋರಾಟಕ್ಕೆ ಭಾರತ ತನ್ನಿಂದ ಸಾಧ್ಯವಾಗುವ ಎಲ್ಲ ರೀತಿಯ ನೆರವನ್ನೂ ನೀಡುತ್ತದೆ. ಕೋವಿಡ್‌–19 ಅನ್ನು ಎಲ್ಲರೂ  ಒಟ್ಟಾಗಿ ಗೆಲ್ಲೋಣ,’ ಎಂದು ಟ್ವೀಟ್‌ ಮಾಡಿದ್ದಾರೆ.  

ತನ್ನ ಕೋರಿಕೆಯ ನಡುವೆಯೂ ಹೈಡ್ರೋಕ್ಲೋರೊಕ್ವಿನ್‌ ರಫ್ತು ನಿರ್ಬಂಧವನ್ನು ತೆರವು ಮಾಡದ ಭಾರತದ ಕ್ರಮವನ್ನು ಮಂಗಳವಾರ ಆಕ್ಷೇಪಿಸಿದ್ದ ಡೊನಾಲ್ಡ್‌ ಟ್ರಂಪ್‌, ಇದಕ್ಕೆ ಪ್ರತೀಕಾರ ಪಡೆಯುವುದಾಗಿ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ರಫ್ತು ನಿರ್ಬಂಧ ತೆರವು ಮಾಡಿದ ಭಾರತ ಔಷಧದ ಅಗತ್ಯವಿರುವ ರಾಷ್ಟ್ರಗಳಿಗೆ ಹೈಡ್ರೋಕ್ಲೋಕ್ವಿನ್‌ ಪೂರೈಸುವ ನಿರ್ಧಾರ ಕೈಗೊಂಡಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು