ಶುಕ್ರವಾರ, ಏಪ್ರಿಲ್ 10, 2020
19 °C
ಹಿರಿಯ ಅಧಿಕಾರಿ ಫ್ರಾನ್ಸ್‌ ತಿಮ್ಮೆರ್‌ಮನ್ಸ್‌ ಪತ್ರ

ಬ್ರೆಕ್ಸಿಟ್‌: ಬ್ರಿಟನ್‌ಗೆ ಅಧಿಕಾರಿಯ ‘ಪ್ರೇಮಪತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ‘ಐರೋಪ್ಯ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್‌ನ ನಿರ್ಧಾರ ದುಃಖಕರವಾದುದು’ ಎಂದು ಬ್ರಸೆಲ್ಸ್‌ನ ಹಿರಿಯ ಅಧಿಕಾರಿಯೊಬ್ಬರು ಬ್ರಿಟನ್‌ಗೆ ‘ಪ್ರೇಮಪತ್ರ’ ಬರೆದಿದ್ದಾರೆ. ಮತ್ತೆ ಮರುಸೇರ್ಪಡೆಯಾದರೆ ಸ್ವಾಗತಿಸುವುದಾಗಿಯೂ ಹೇಳಿದ್ದಾರೆ. 

‘ನನಗೆ ಗೊತ್ತಿದೆ ನಿಮಗೆ ಗೊತ್ತಿದೆ. ನಿಮ್ಮನ್ನು ನಾನು ಪ್ರೀತಿಸುತ್ತೇನೆ. ನಾನು ಒಂದು ರೀತಿ ಹಳೆಯ ಪ್ರೇಮಿಯ ಹಾಗೆ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ಬಲ್ಲೆ’ ಎಂದು ಐರೋಪ್ಯ ಆಯೋಗದ ಉಪಾಧ್ಯಕ್ಷ ಫ್ರಾನ್ಸ್ ತಿಮ್ಮೆರ್‌ಮನ್ಸ್‌ ಅವರು ‘ಗಾರ್ಡಿಯನ್‌’ ಪತ್ರಿಕೆಯ ಆವೃತ್ತಿಯಲ್ಲಿ ಬರೆದಿದ್ದಾರೆ.

‘ನೀವು ಹೊರ ಹೋಗುವುದಕ್ಕೆ ನಿರ್ಧರಿಸಿದ್ದೀರಿ. ಇದು ನನ್ನ ಹೃದಯವನ್ನು ನುಚ್ಚು ನೂರು ಮಾಡಿದೆ. ಆದರೆ ತೀರ್ಮಾನವನ್ನು ನಾನು ಗೌರವಿಸಲೇಬೇಕು. ನಾವು ದೂರ ಹೋಗುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು