ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗಳ ಪರ ನ್ಯಾಯಾಲಯಕ್ಕೆ ಮೊರೆ

ಅರವಳಿಕೆ ಇಲ್ಲದೆಯೇ ವೃಷಣಗಳ ಸಾಮರ್ಥ್ಯ ಕುಂದಿಸುವ ಕ್ರೂರ ಪದ್ಧತಿಯನ್ನು ನಿಷೇಧಿಸಲು ಅರ್ಜಿ ಸಲ್ಲಿಕೆ
Last Updated 15 ಡಿಸೆಂಬರ್ 2019, 19:53 IST
ಅಕ್ಷರ ಗಾತ್ರ

ಬರ್ಲಿನ್‌ : ಅರವಳಿಕೆ ಇಲ್ಲದೆಯೇ ಹಂದಿಗಳಿಗೆ ವೃಷಣ ಸಾಮರ್ಥ್ಯ ಕುಂದಿಸುವ ಕ್ರೂರ ಪದ್ಧತಿಯನ್ನು ನಿಷೇಧಿಸಬೇಕು ಎಂದು ಪ್ರಾಣಿ ದಯಾ ಸಂಸ್ಥೆಯ (ಪೇಟಾ) ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಹಂದಿಗಳ ಪರ ಇವರು ನ್ಯಾಯ ಕೇಳಿದ್ದು, ಅವುಗಳನ್ನೇ ದೂರುದಾರರನ್ನಾಗಿ ಮಾಡಲಾಗಿದೆ.

ಪ್ರಾಣಿಗಳಿಗೆ ತೀವ್ರ ನೋವು ನೀಡುವ ಪದ್ಧತಿ ಇದಾಗಿದ್ದು, ಯುರೋಪ್‌ ರಾಷ್ಟ್ರಗಳಲ್ಲಿ ವಿವಾದಕ್ಕೀಡಾಗಿದೆ. ಸ್ವೀಡನ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಈ ಪದ್ಧತಿಯನ್ನು ನಿಷೇಧಿಸಲಾಗಿದೆ.

ಹಂದಿಗಳು ಜನಿಸಿದ ಕೆಲವು ದಿನಗಳ ಬಳಿಕ ಈ ಕ್ರಮಕೈಗೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ, ಗಂಡು ಹಂದಿಗಳ ಮಾಂಸವನ್ನು ಬೇಯಿಸಿದಾಗ ಕೆಟ್ಟ ವಾಸನೆ ಬರುತ್ತದೆ ಎಂದು ರೈತರು ವಾದ ಮಂಡಿಸಿದ್ದಾರೆ.

ಅರವಳಿಕೆ ಇಲ್ಲದೆಯೇ ವೃಷಣಗಳ ಸಾಮರ್ಥ್ಯ ಕುಂದಿಸುವ ಪದ್ಧತಿಯನ್ನು 2013ರಲ್ಲಿ ಜರ್ಮನಿಯ ಸಂಸತ್‌ ನಿಷೇಧಿಸಿತ್ತು. ಹೊಸ ಪದ್ಧತಿಗೆ ಬದಲಾಯಿಸಿಕೊಳ್ಳಲು ಐದು ವರ್ಷಗಳ ಕಾಲಾವಕಾಶವನ್ನು ಸಂಸತ್‌ ನೀಡಿತ್ತು. ಕಳೆದ ವರ್ಷ ಮತ್ತೆ 2021ರವರೆಗೆ ವಿಸ್ತರಿಸಲಾಯಿತು.

ಇದರಿಂದ, ಆಕ್ರೋಶಗೊಂಡಿರುವ ಪ್ರಾಣಿ ಪ್ರೇಮಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮಾನವ ಹಕ್ಕುಗಳ ರೀತಿಯಲ್ಲೇ ಪ್ರಾಣಿಗಳಿಗೂ ಹಕ್ಕುಗಳಿವೆ. ಅರವಳಿಕೆ ನೀಡದೆಯೇ ಪ್ರಾಣಿಗಳ ಮೇಲೆ ಕ್ರೂರ ಕೃತ್ಯವೆಸಗಲಾಗುತ್ತಿದೆ ಎಂದು ಇವರು ದೂರಿದ್ದಾರೆ.

ಆದರೆ, ಈ ದೂರನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಲಿದೆಯೇ ಎನ್ನುವ ಅನುಮಾನವೂ ಮೂಡಿದೆ.

‘ಜರ್ಮನಿಯ ಕಾನೂನಿನಲ್ಲಿ ಪ್ರಾಣಿಗಳಿಗೆ ತಮ್ಮದೇ ಆದ ಕಾನೂನು ಇಲ್ಲ. ಹೀಗಾಗಿ, ಈ ಹೋರಾಟದಲ್ಲಿ ಯಶಸ್ಸು ದೊರೆಯವುದು ಕಷ್ಟಸಾಧ್ಯ’ ಎಂದು ಮಾನ್ನಹೀಮ್‌ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಜೆನ್ಸ್‌ ಬ್ಯೂಲ್ಟೆ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ವರ್ಷ ಜರ್ಮನಿಯ ರೈತರು ಸುಮಾರು ಎರಡು ಕೋಟಿ ಹಂದಿಗಳ ವೃಷಣಗಳ ಸಾಮರ್ಥ್ಯ ಕುಂದಿಸುವ ಕಾರ್ಯಕೈಗೊಳ್ಳುತ್ತಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT