ಶುಕ್ರವಾರ, ಡಿಸೆಂಬರ್ 6, 2019
20 °C
ದಾವೂದ್‌ ಹಸ್ತಾಂತರಕ್ಕೆ ಪರೋಕ್ಷ ಆಗ್ರಹ

ಉಗ್ರರನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಭಾರತ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ‘ಭಾರತದ ಜತೆ ಉತ್ತಮ ಸಂಬಂಧವಿಟ್ಟುಕೊಳ್ಳಬೇಕು ಎಂಬ ಗಂಭೀರ ಇಚ್ಛೆ ಪಾಕಿಸ್ತಾನಕ್ಕೆ ಇದ್ದರೆ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿ ಪಾಕಿಸ್ತಾನದಲ್ಲಿ ಅವಿತಿರುವ ಭಾರತೀಯರನ್ನು ಹಸ್ತಾಂತರಿಸಲಿ’ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ. 

ಪಾಕಿಸ್ತಾನದಲ್ಲಿ ಅಡಗಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹಸ್ತಾಂತರಿಸುವ ಕುರಿತು ಪರೋಕ್ಷವಾಗಿ ಜೈಶಂಕರ್‌ ಈ ಹೇಳಿಕೆ ನೀಡಿದ್ದಾರೆ. 

ಫ್ರಾನ್ಸ್‌ನ ದೈನಿಕ ‘ಲು ಮೊಂಡ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್‌, ‘ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ಜತೆಗೆ ಸಂಬಂಧ ‘ಕಷ್ಟಸಾಧ್ಯ’. ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿರುವುದರ ಬಗ್ಗೆ ಪಾಕಿಸ್ತಾನ ನಿರಾಕರಿಸುವುದಿಲ್ಲ. ತನ್ನ ನೆಲದಲ್ಲಿ ಭಯೋತ್ಪಾದನೆ ಎಂಬ ಕೈಗಾರಿಕೆ ಅಭಿವೃದ್ಧಿಪಡಿಸಿರುವ ಪಾಕಿಸ್ತಾನ, ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುತ್ತಿದೆ’ ಎಂದಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು