ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಹಾರ್ವೆ ವಿಲ್‌ಸ್ಟೀನ್ ತಪ್ಪಿತಸ್ಥ

ಲಾಸ್ ಏಂಜಲೀಸ್ ನ್ಯಾಯಾಲಯದ ತೀರ್ಪು
Last Updated 7 ಜನವರಿ 2020, 18:14 IST
ಅಕ್ಷರ ಗಾತ್ರ

ನ್ಯೂಯಾರ್ಕ್ :ಅಮೆರಿಕದ ಸಿನಿಮಾ ನಿರ್ಮಾಪಕ ಹಾರ್ವೆ ವಿಲ್‌ಸ್ಟೀನ್ ಅವರ ವಿರುದ್ಧ ಲಾಸ್‌ ಏಂಜಲೀಸ್‌ನಲ್ಲಿ ದಾಖಲಾದ ಹೊಸಲೈಂಗಿಕ ಅಪರಾಧ ಆರೋಪ ಪ್ರಕರಣದಲ್ಲಿ ಹಾರ್ವೆ ತಪ್ಪಿತಸ್ಥನೆಂದು ಸಾಬೀತಾಗಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಹಾರ್ವೆ ವಿರುದ್ಧ ಈ ಹಿಂದೆ ಆರೋಪಿಸಲಾಗಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಪ್ರಕರಣಗಳ ವಿಚಾರಣೆ ನ್ಯೂಯಾರ್ಕ್‌ನಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಈ ದೋಷಾರೋಪಣೆ ಮಾಡಲಾಗಿದೆ ಎಂದು ಅಭಿಯೋಜಕರು ಮಾಹಿತಿ ನೀಡಿದ್ದಾರೆ.

2013ರ ಫೆ. 18ರಂದು ಮಹಿಳೆಯೊಬ್ಬರನ್ನು ಹೋಟೆಲ್‌ನ ಕೋಣೆಯೊಳಗೆ ಬಲವಂತವಾಗಿ ಎಳೆದೊಯ್ದು ಅತ್ಯಾಚಾರನಡೆಸಿರುವ ಮತ್ತುಮರುದಿನ ರಾತ್ರಿ ಬೆವರ್ಲಿ ಹಿಲ್ಸ್ ಹೋಟೆಲ್‌ನ ಕೋಣೆಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹಾರ್ವೆ ಮೇಲಿತ್ತು ಎಂದು ಲಾಸ್ ಏಂಜಲೀಸ್‌ನ ಕೌಂಟಿ ಡಿಸ್ಟ್ರಿಕ್ಟ್‌ ಅಟಾರ್ನಿ ಜಾಕಿ ಲೇಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

‘ಪ್ರತಿವಾದಿಯು ತನ್ನ ಶಕ್ತಿ ಮತ್ತು ಪ್ರಭಾವ ಬಳಸಿ ಮಹಿಳೆಯರನ್ನು ಬಲಿಪಶು ಮಾಡಿದ್ದಲ್ಲದೇ, ಅವರ ವಿರುದ್ಧ ಹಿಂಸಾತ್ಮಕ ಅಪರಾಧಗಳನ್ನು ಎಸಗಿದ್ದಾರೆಂದು ಪುರಾವೆಗಳು ಹೇಳುತ್ತವೆ. ಸಂತ್ರಸ್ತೆಯರು ತಮ್ಮ ಮೇಲಾದ ದೌರ್ಜನ್ಯವನ್ನು ಧೈರ್ಯದಿಂದ ಹೇಳಿಕೊಂಡಿರುವುದು ಶ್ಲಾಘನೀಯ’ ಎಂದು ಲೇಸಿ ಹೇಳಿದ್ದಾರೆ.

ಬಲವಂತದ ಸಂಭೋಗ, ಮುಖ ಮೈಥುನ ಸೇರಿದಂತೆ ಇತ್ಯಾದಿ ಪ್ರಕರಣಗಳಲ್ಲಿ ಹಾರ್ವೆ ತಪ್ಪಿತಸ್ಥನೆಂದು ಸಾಬೀತಾದಲ್ಲಿ28 ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.ಹಾರ್ವೆ ಜಾಮೀನು ಪಡೆಯಬೇಕಾದಲ್ಲಿ ₹35.9 ಕೋಟಿ ದಂಡ ತೆರೆಬೇಕಾಗುತ್ತದೆ.

ಹಾಲಿವುಡ್‌ನ ಖ್ಯಾತ ನಟಿ ಎಂಜಲೀನಾ ಜೋಲಿ ಸೇರಿದಂತೆ ಅನೇಕ ನಟಿಯರು ಎರಡು ವರ್ಷಗಳ ಹಿಂದೆ ಹಾರ್ವೆ ವಿನ್‌ಸ್ಟೀನ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದು ‘ಮೀ ಟೂ’ ಚಳವಳಿಯ ಸ್ವರೂಪ ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT