ಶುಕ್ರವಾರ, ಅಕ್ಟೋಬರ್ 18, 2019
23 °C

ಪ್ರಧಾನಿ ಕಾರ್ಯಕ್ರಮಕ್ಕೆ ‘ಹೌಡಿ ಮೋದಿ’ ಹೆಸರೇಕೆ ಬಂತು, ಅರ್ಥವೇನು?

Published:
Updated:

ಹ್ಯೂಸ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಭಾಗವಹಿಸಲಿರುವ ಬಹುನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮ ಭಾರತೀಯ ಕಾಲಮಾನ ಪ್ರಕಾರ ಇಂದು ರಾತ್ರಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ‘ಹೌಡಿ ಮೋದಿ’ ಎಂಬ ಹೆಸರಿಟ್ಟಿರುವುದು ಯಾಕೆ? ‘ಹೌಡಿ’ ಎಂದರೇನು ಎಂಬ ಕುತೂಹಲ ಸಹಜವಾಗಿಯೇ ಜನರಲ್ಲಿ ಮೂಡಿದೆ.

ಇದನ್ನೂ ಓದಿ: 370ನೇ ವಿಧಿ ರದ್ದತಿಗೆ ಧನ್ಯವಾದ: ಪ್ರಧಾನಿ ಮೋದಿ ಭೇಟಿ ಮಾಡಿದ ಕಾಶ್ಮೀರಿ ಪಂಡಿತರು

‘ಹೌಡಿ’ ಎಂದರೆ ಅನೌಪಚಾರಿಕವಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಒಂದು ಪದ. ‘ಹೌ ಡು ಯು ಡು ಅಥವಾ ಹೇಗಿದ್ದೀರಿ’ ಎಂಬ ಪದದ ಸಂಕ್ಷಿಪ್ತ ರೂಪವಾಗಿ ಬಳಕೆಯಲ್ಲಿದೆ. ಅಮೆರಿಕದ ಮಕ್ಸಿಕೊ, ನೆವಾಡ, ಒರೆಗಾನ್ ಮತ್ತು ಟೆಕ್ಸಾಸ್‌ನಲ್ಲಿ ಈ ಪದ ಆಡುಭಾಷೆಯಾಗಿ ಬಳಕೆಯಲ್ಲಿದೆ. ಇದೇ ಪದವನ್ನು ಮೋದಿ ಅವರ ಕಾರ್ಯಕ್ರಮಕ್ಕೂ ಇಡಲಾಗಿದೆ.

ಹ್ಯೂಸ್ಟನ್‌ನ ಎನ್‌ಆರ್‌ಜಿ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಸಾವಿರ ಭಾರತೀಯ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ.

ಇನ್ನಷ್ಟು...

‘ಟ್ರಂಪ್–ಮೋದಿ ವೇದಿಕೆ ಹಂಚಿಕೆ: ಪಾಕ್ ಪ್ರಧಾನಿ ಇಮ್ರಾನ್‌ಗೆ ಕಪಾಳಮೋಕ್ಷವೇ ಸರಿ’

ಹ್ಯೂಸ್ಟನ್‌: ಬಹುನಿರೀಕ್ಷಿತ ‘ಹೌಡಿ ಮೋದಿ’ ಇಂದು

Post Comments (+)