ಶುಕ್ರವಾರ, ಏಪ್ರಿಲ್ 3, 2020
19 °C

ಭಾರತದ ನೀತಿಯಿಂದ ಪಾಕ್‌ನಲ್ಲಿ ನಿರಾಶ್ರಿತರ ಹೊಸ ಬಿಕ್ಕಟ್ಟು: ಇಮ್ರಾನ್ ಖಾನ್  

ಪಿಟಿಐ Updated:

ಅಕ್ಷರ ಗಾತ್ರ : | |

Imran khan

ಇಸ್ಲಾಮಾಬಾದ್: 'ಭಾರತದ ಪ್ರಸ್ತುತ ಸ್ಥಿತಿಯನ್ನು ಗಮನಿಸುವಲ್ಲಿ ಅಂತರರಾಷ್ಟ್ರೀಯ ಸಮುದಾಯ ವಿಫಲವಾದರೆ, ಪಾಕಿಸ್ತಾನವು ನಿರಾಶ್ರಿತರ ಹೊಸ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ’ ಎಂದು ಪಾಕಿಸ್ತಾನದ  ಪ್ರಧಾನಿ ಇಮ್ರಾನ್ ಖಾನ್  ಹೇಳಿದ್ದಾರೆ.

ನಿರಾಶ್ರಿತರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದ ಉಗ್ರ ರಾಷ್ಟ್ರೀಯವಾದವನ್ನು ಅಂತರರಾಷ್ಟ್ರೀಯ ಸಮುದಾಯವು ಪರಿಶೀಲಿಸದೇ ಹೋದಲ್ಲಿ ವಿನಾಶಕ್ಕೆ ಕಾರಣವಾಗಬಹುದು‌ ಎಂದು ಹೇಳಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ .

ಜವಾಹರ ಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಅವರ ಭಾರತ ಈಗಿಲ್ಲ. ಈ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಬಹು ದೊಡ್ಡ ಸಮಸ್ಯೆ ಎದುರಾಗಲಿದೆ’ ಎಂದು ಖಾನ್ ಹೇಳಿದ್ದಾರೆ ಎಂದು ದುನಿಯಾ ನ್ಯೂಸ್ ವರದಿ ಮಾಡಿದೆ. 

ಭಾರತಕ್ಕೆ ಪಾಕಿಸ್ತಾನವನ್ನು ನಾಶ ಮಾಡಲು 11 ದಿನ ಸಾಕು ಎಂದು ನರೇಂದ್ರ ಮೋದಿ ಹೇಳಿದ್ದರು.  ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಪ್ರಧಾನಿಯೊಬ್ಬರು ಹೇಳುವ ಬೇಜವಾಬ್ದಾರಿಯ ಹೇಳಿಕೆ ಇದು ಎಂದಿದ್ದಾರೆ ಖಾನ್.

ಹಿಂದುತ್ವ ವಿಚಾರಧಾರೆಯಿಂದಾಗಿ ಕಾಶ್ಮೀರಿಗಳನ್ನು 200ಕ್ಕಿಂತಲೂ ಹೆಚ್ಚು ದಿನ ನಿರ್ಬಂಧದಲ್ಲಿಡಲಾಗಿದೆ.  ದೇ ವಿಚಾರಧಾರೆಯಿಂದ ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿರುವ 200 ದಶಲಕ್ಷ ಮುಸ್ಲಿಮರನ್ನು ಗುರಿಯಾಗಿರಿಸಿ ಎರಡು ತಾರತಮ್ಯದ ನೀತಿಗಳನ್ನು ಅಂಗೀಕರಿಸಿದೆ.   ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ತೀರ್ಮಾನವನ್ನು ಉಲ್ಲೇಖಿಸಿ ಖಾನ್ ಈ ರೀತಿ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು