ಬುಧವಾರ, ಆಗಸ್ಟ್ 4, 2021
26 °C

ಡೆಮಾಕ್ರಾಟಿಕ್ ಪಕ್ಷ ಸಮಾವೇಶಕ್ಕೆ ಭಾರತ ಮೂಲದ ಉದ್ಯಮಿ ಭುಟೊರಿಯ ಅವರಿಗೆ ಆಹ್ವಾನ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಸಿಲಿಕಾನ್‌ ವ್ಯಾಲಿಯ ಉದ್ಯಮಿ, ಭಾರತೀಯ ಸಂಜಾತ ಅಜಯ್‌ ಜೈನ್‌ ಭುಟೊರಿಯಾ ಅವರನ್ನು ಆಗಸ್ಟ್‌ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್‌ ಅವರ ಡೆಮಾಕ್ರಾಟಿಕ್‌ ಪಕ್ಷದ ರಾಷ್ಟ್ರೀಯ ಸಮಾವೇಶಕ್ಕೆ ಅತಿಥಿಯಾಗಿ ಆಹ್ವಾನಿಸಲಾಗಿದೆ.

ಉದ್ದೇಶಿತ ಸಮಾವೇಶದಲ್ಲಿ 77 ವರ್ಷದ ಬಿಡೆನ್‌ ಅವರನ್ನು ನವೆಂಬರ್‌ನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಲಾಗುತ್ತದೆ.

ಚುನಾವಣೆಯಲ್ಲಿ ಪುನರಾಯ್ಕೆ ಬಯಸಿರುವ ಹಾಲಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಬಿಡೆನ್‌ ಪ್ರತಿಸ್ಪರ್ಧಿಯಾಗಲಿದ್ದಾರೆ.

ಕ್ಯಾಲಿಫೋರ್ನಿಯಾ ಡಿಸ್ಟ್ರಿಕ್ಟ್‌ನ 17ನೇ ರಾಷ್ಟ್ರೀಯ ಸಮಾವೇಶದ ಜಿಲ್ಲಾ ಹಂತದ ಸಭೆಯಲ್ಲಿ ಆನ್‌ಲೈನ್‌ ಮತದಾನದ ಮೂಲಕ ಇವರು ಬಿಡೆನ್‌ನ ಅವರ ಅತಿಥಿಯಾಗಿ ಆಯ್ಕೆಯಾದರು.

ಭುಟೊರಿಯಾ ಅವರು ಬಿಡೆನ್‌ ಅವರ ಬೆಂಬಲಿಗರಾಗಿದ್ದು, ಏಷ್ಯಾ ಅಮೆರಿಕರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು