ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಟೆಕಿ

ಗುರುವಾರ , ಜೂಲೈ 18, 2019
22 °C

ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಟೆಕಿ

Published:
Updated:

ವಾಷಿಂಗ್ಟನ್‌: ಭಾರತ ಸಂಜಾತ ಟೆಕಿಯೊಬ್ಬರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಅಮೆರಿಕದ ಲೊವಾದಲ್ಲಿ ನಡೆದಿದೆ.

ಲೊವಾ ರಾಜ್ಯದ ವೆಸ್ಟ್‌ ಡೆಸ್‌ ಮೊಯಿನೆಸ್‌ ನಗರದ ತಮ್ಮ ಮನೆಯಲ್ಲಿಯೇ ಆಂಧ್ರ ಪ್ರದೇಶ ಮೂಲದ ಚಂದ್ರಶೇಖರ್‌ ಸುಂಕರಾ (44), ಲಾವಣ್ಯಾ ಸುಂಕರಾ (41) ಹಾಗೂ 15 ವರ್ಷ, 10 ವರ್ಷದ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ನಗರದ ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಮಾಹಿತಿ ಆಧರಿಸಿ, ‘ಈ ಕೊಲೆಯನ್ನು ಚಂದ್ರಶೇಖರ್‌ ಅವರೇ ಮಾಡಿ, ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬ ತೀರ್ಮಾನಕ್ಕೆ ಪೊಲೀಸರು ಭಾನುವಾರ ಬಂದಿದ್ದಾರೆ.

ನಾಲ್ವರ ಮೃತದೇಹಗಳಲ್ಲೂ ಗುಂಡೇಟಿನ ಗಾಯಗಳಿದ್ದು, ಅವರೆಲ್ಲರೂ ಅದರಿಂದಲೇ ಮೃತಪಟ್ಟಿದ್ದಾರೆ ಎಂದು ರಾಜ್ಯ ವೈದ್ಯಾಧಿಕಾರಿ ಕಚೇರಿ ತಿಳಿಸಿದೆ. ಈ ಕೃತ್ಯಕ್ಕೆ ಕಾರಣವೇನು? ಪ್ರಚೋದನಾಕಾರಿ ಅಂಶಗಳಾವವು ಎಂಬುದರ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. 

ಲೊವಾದ ಸಾರ್ವಜನಿಕ ಸುರಕ್ಷಾ ಇಲಾಖೆಯ ತಂತ್ರಜ್ಞಾನ ಸೇವಾ ಕೇಂದ್ರದಲ್ಲಿ ಐಟಿ ಉದ್ಯೋಗಿಯಾಗಿ ಚಂದ್ರಶೇಖರ್‌ ಕೆಲಸ ಮಾಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !