ಬುಧವಾರ, ಮೇ 27, 2020
27 °C

ಕೋವಿಡ್-19: ಭಾರತೀಯ ಮೂಲದ ಪತ್ರಕರ್ತ ಅಮೆರಿಕದಲ್ಲಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

covid 19

ನ್ಯೂಯಾರ್ಕ್: ಕೋವಿಡ್ -19 ರೋಗ ಬಾಧಿತರಾಗಿದ್ದ ಭಾರತೀಯ ಮೂಲದ ಪತ್ರಕರ್ತ ಬ್ರಹ್ಮ್ ಕಾಂಚಿಬೊತ್ಲಾ ನ್ಯೂಯಾರ್ಕ್‌ನಲ್ಲಿ ಸಾವಿಗೀಡಾಗಿದ್ದಾರೆ.

9 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾಂಚಿಬೊತ್ಲಾ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಸುಧಾಮ ಕಾಂಚಿಬೊತ್ಲಾ ಹೇಳಿದ್ದಾರೆ. 66ರ ಹರೆಯದ ಕಾಂಚಿಬೊತ್ಲಾ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿದ್ದರು.

ಅಮೆರಿಕದಲ್ಲಿ28 ವರ್ಷಗಳ ವೃತ್ತಿ ಜೀವನ ನಡೆಸಿದ ಕಾಂಚಿಬೊತ್ಲಾ ವಿತ್ತ ಪತ್ರಿಕೆ ಮೆರ್ಜರ್ ಮಾರ್ಕೆಟ್‌ನಲ್ಲಿ 11 ವರ್ಷ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ನ್ಯೂಸ್ ಇಂಡಿಯಾ- ಟೈಮ್ಸ್ ವಾರಪತ್ರಿಕೆಯಲ್ಲಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ಭಾರತದಲ್ಲಿ ಹಲವಾರು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು  1992ರಲ್ಲಿ ಅಮೆರಿಕಗೆ ಹೋಗಿದ್ದರು. ನ್ಯೂಯಾರ್ಕ್‌ನಲ್ಲಿ ನಿರ್ಬಂಧ ಇರುವುದರಿಂದ ಅಂತ್ಯ ಸಂಸ್ಕಾರ ನಡೆಸುವ ಬಗ್ಗೆ ಕುಟುಂಬ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಸುಧಾಮ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು