ಮಂಗಳವಾರ, ಆಗಸ್ಟ್ 3, 2021
23 °C

ಗಾಂಜಾ ಸಾಗಣೆ: ಭಾರತೀಯ ಪ್ರಜೆಯ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

arrest

ವಾಷಿಂಗ್ಟನ್: ಕೆನಡಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಟ್ರಕ್‌ ಓಡಿಸುತ್ತಿದ್ದ 21 ವರ್ಷದ ಭಾರತೀಯ ಪ್ರಜೆಯನ್ನು ಸುಮಾರು ₹18.86 ಕೋಟಿ ಮೌಲ್ಯದ ಗಾಂಜಾ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಮೆರಿಕದ ವಕೀಲರೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿ ಅರ್ಷದೀಪ್‌ ಸಿಂಗ್‌ ಆಗಿದ್ದು, ಆರೋಪ ಸಾಭೀತಾದರೆ ಕಡ್ಡಾಯವಾಗಿ ಕನಿಷ್ಠ ಐದು ವರ್ಷ ಅಥವಾ ಗರಿಷ್ಠ 40 ವರ್ಷ ಸಜೆ ಹಾಗೂ ಸುಮಾರು ₹ 37.73  ರೂಪಾಯಿ ದಂಡ ವಿಧಿಸಲಾಗುತ್ತದೆ. 

ಕೆನಡಾ ಪರವಾನಗಿಯ ಫಲಕ ಹೊಂದಿದ್ದ ವಾಣಿಜ್ಯ ಟ್ರಕ್‌ ಅನ್ನು ನ್ಯೂಯಾರ್ಕ್‌ನಲ್ಲಿ ವಶಕ್ಕೆ ಪಡೆದು ಪರಿಶೀಲಿಸಿದಾಗ, ಭಾರಿ ಪ್ರಮಾಣದ ಗಾಂಜಾ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು