ಭಾನುವಾರ, ಸೆಪ್ಟೆಂಬರ್ 26, 2021
21 °C

‘ಮಂಗಳ’ ಹೆಲಿಕಾಪ್ಟರ್‌ಗೆ ಹೆಸರು ನೀಡಿದ ಭಾರತ ಮೂಲದ ಬಾಲಕಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಮಂಗಳನ ಅಂಗಳಕ್ಕೆ ಹಾರಲಿರುವ ನಾಸಾದ ಮೊದಲ ಹೆಲಿಕಾಪ್ಟರ್‌ಗೆ ಹೆಸರು ನೀಡಿದ ಹೆಗ್ಗಳಿಕೆ ಭಾರತ ಮೂಲದ ಬಾಲಕಿಗೆ ದೊರಕಿದೆ.

ಅಲಬಾಮಾದ ನಾರ್ತ್‌ಪೋರ್ಟ್‌ನ ಪ್ರೌಢಶಾಲೆಯ ವಿದ್ಯಾರ್ಥಿನಿ ವನೀಜಾ ರೂಪಾನಿ ಈ ಜಾಣ್ಮೆ ತೋರಿದವರು. ರೂಪಾನಿ, ನಾಸಾದ ‘ನೇಮ್ ದಿ ರೋವರ್’ ಸ್ಪರ್ಧೆಯಲ್ಲಿ  ಪ್ರಬಂಧವನ್ನು ಮಂಡಿಸಿದ್ದರು. ಇದೀಗ ಅವರು ಸೂಚಿಸಿದ್ದ ಹೆಸರನ್ನೇ ನಾಸಾ ಇಟ್ಟಿದೆ. 

ಅನ್ಯ ಗ್ರಹದಲ್ಲಿ ಹಾರಾಟವನ್ನು ನಡೆಸಲಿರುವ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. 

‘ನಮ್ಮ ಮಾರ್ಸ್ ಹೆಲಿಕಾಪ್ಟರ್‌ಗೆ ಹೊಸ ಹೆಸರು ದೊರಕಿದೆ! ‘ಇಂಜಿನ್ಯೂಯಿಟಿ’ಯನ್ನು ಭೇಟಿಯಾಗಿ. ವಿದ್ಯಾರ್ಥಿನಿ ವನೀಜಾ ರೂಪಾನಿ ನಮ್ಮ ‘ನೇಮ್ ದಿ ರೋವರ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ’ ಎಂದು ನಾಸಾ ಟ್ವೀಟ್ ಮಾಡಿದೆ.

ಈ ಸ್ಪರ್ಧೆಯಲ್ಲಿ ಅಮೆರಿಕದ ಪ್ರತಿ ರಾಜ್ಯದ ವಿದ್ಯಾರ್ಥಿಗಳಿಂದ 28,000 ಪ್ರಬಂಧ ಸಲ್ಲಿಕೆಯಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು