ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಫೀಜ್‌ ಸೈಯದ್‌ಗೆ ಮಧ್ಯಂತರ ಜಾಮೀನು

Last Updated 15 ಜುಲೈ 2019, 17:16 IST
ಅಕ್ಷರ ಗಾತ್ರ

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ, ಜೆಯುಡಿ ಮುಖ್ಯಸ್ಥ ಹಫೀಜ್‌ ಸಯೀದ್‌ ಮತ್ತು ಮೂವರು ಸಹಚರರಿಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಹಫೀಜ್‌ ಸೇರಿದಂತೆ ಹಫೀಜ್‌ ಮಸೂದ್‌, ಅಮೀರ್ ಹಮ್ಜಾ ಮತ್ತು ಮಲಿಕ್‌ ಜಫರ್‌ಗೆ ಆಗಸ್ಟ್‌ 3ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ.

ಜೆಯುಡಿ (ಜಮಾತ್‌–ಉದ್‌–ದವಾ) ಕಾನೂನುಬಾಹಿರವಾಗಿ ನಮ್ಮ ನೆಲದಲ್ಲಿ ತುಂಡು ಭೂಮಿಯನ್ನೂಬಳಸಿಲ್ಲ. ಹಾಗಾಗಿ ಜಾಮೀನು
ನೀಡುವಂತೆ ವಿಚಾರಣೆ ವೇಳೆಸಯೀದ್‌ ಪರ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದರು.

ಜೆಯುಡಿ ವ್ಯಾಪ್ತಿಯಲ್ಲಿ 300 ಸಂಸ್ಥೆಗಳು, ಶಾಲೆ, ಆಸ್ಪತ್ರೆ, ಆಂಬುಲೆನ್ಸ್‌ ಸೇವೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT