ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಚೀನಾದ ಜೈವಿಕಾಸ್ತ್ರದ ಭಾಗ: ಇಸ್ರೇಲಿ ಗುಪ್ತದಳದ ಮಾಜಿ ಅಧಿಕಾರಿ

Last Updated 29 ಜನವರಿ 2020, 10:29 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್‌ವುಹಾನ್ನಗರದಲ್ಲಿರುವ ಲ್ಯಾಬ್‌ನಲ್ಲಿ ಉತ್ಪತ್ತಿಯಾಗಿದೆ. ಇದು ಚೀನಾದ ಜೈವಿಕಾಸ್ತ್ರ ಯೋಜನೆಯ ಭಾಗವಾಗಿತ್ತು ಎಂದು ಇಸ್ರೇಲಿ ಗುಪ್ತದಳದ ಮಾಜಿ ಅಧಿಕಾರಿ ಡಾನಿ ಶೋಹಂ ಹೇಳಿದ್ದಾರೆ.

ಚೀನಾದ ಅತ್ಯಾಧುನಿಕ ವೈರಸ್ ರಿಸರ್ಚ್ ಲ್ಯಾಬೊರೇಟರಿ ಆಗಿರುವ ವುಹಾನ್ ಇನ್ಸಿಟ್ಯೂಟ್ ಆಫ್ ವೈರೋಲಜಿ ಬಗ್ಗೆ 2015ರಲ್ಲಿ ವುಹಾನ್ ಟಿವಿ ಪ್ರಸಾರ ಮಾಡಿದ್ದ ವರದಿಯನ್ನು ಕಳೆದ ವಾರ ರೇಡಿಯೊ ಫ್ರೀ ಏಷ್ಯಾ ಮರುಪ್ರಸಾರ ಮಾಡಿತ್ತು.

ಮಾರಣಾಂತಿಕ ವೈರಸ್‌ಗಳ ಬಗ್ಗೆ ಅಧ್ಯಯನ ನಡೆಸುವ ಚೀನಾದ ಏಕೈಕ ಪ್ರಯೋಗಾಲಯ ಇದಾಗಿದೆ.

ಈ ಸಂಸ್ಥೆಯಲ್ಲಿನ ಕೆಲವು ಪ್ರಯೋಗಾಲಯಗಳು ಚೀನಾದ (ಜೈವಿಕಾಸ್ತ್ರ) ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿದ್ದು, ಪ್ರಮುಖವಾಗಿ ಅಲ್ಲದೇ ಇದ್ದರೂ ಚೀನಾದ ಜೈವಿಕಾಸ್ತ್ರ ಯೋಜನೆಯಲ್ಲಿ ಇವು ಜತೆಯಾಗಿವೆ ಎಂದು ಶೋಹಂ ಹೇಳಿರುವುದಾಗಿ ದಿ ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ.
ನಾಗರಿಕ- ಸೇನಾಪಡೆಯ ಅಧ್ಯಯನದ ಭಾಗವಾಗಿ ಜೈವಿಕಾಸ್ತ್ರಗಳ ಕಾರ್ಯ ಆರಂಭಿಸಿದ್ದು, ಇದು ಗುಪ್ತವಾಗಿ ನಡೆದಿದೆ ಎಂದು ಶೋಹಂ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಮೆಡಿಕಲ್ ಮೈಕ್ರೊಬಯಾಲಜಿಯಲ್ಲಿ ಡಾಕ್ಟರೇಟ್ ಪಡೆದಿರುವ ಶೋಹಂ 1970-1991ರ ಅವಧಿಯಲ್ಲಿ ಇಸ್ರೇಲಿ ಮಿಲಿಟರಿಯ ಗುಪ್ತದಳದಲ್ಲಿ ಹಿರಿಯ ವಿಶ್ಲೇಷಕರಾಗಿದ್ದರು. ಲೆಫ್ಟಿನೆಂಟ್ ಕರ್ನಲ್ ಸ್ಥಾನವನ್ನು ಇವರು ಹೊಂದಿದ್ದರು.

ಆದಾಗ್ಯೂ, ಜೈವಿಕಾಸ್ತ್ರಗಳ ಬಗ್ಗೆ ಆರೋಪವನ್ನು ಚೀನಾ ನಿರಾಕರಿಸಿದೆ. ಆದರೆ ಯುದ್ಧ ಕಾರ್ಯಾಚರಣೆಗಳಲ್ಲಿ ಜೈವಿಕಾಸ್ತ್ರ ಬಳಕೆ ಬಗ್ಗೆ ಚೀನಾದ ರಾಜ್ಯ ಇಲಾಖೆ ಕಳೆದ ವರ್ಷ ಅನುಮಾನ ವ್ಯಕ್ತ ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT