ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ರೆಮೆಡ್‌ ಸಿವಿರ್ ಔಷಧಿ ಬಳಕೆ ಜಪಾನ್ ಒಪ್ಪಿಗೆ

Last Updated 7 ಮೇ 2020, 20:32 IST
ಅಕ್ಷರ ಗಾತ್ರ

ಟೊಕಿಯೊ: ಕೋವಿಡ್‌ ಪೀಡಿತ ರೋಗಿಗಳಿಗೆ ಆ್ಯಂಟಿ ವೈರಲ್ ಔಷಧಿಯಾಗಿ ರೆಮೆಡ್‌ಸಿವಿರ್ ಅನ್ನು ನೀಡಲು ಜಪಾನ್ ಸರ್ಕಾರ ಗುರುವಾರ ಒಪ್ಪಿಗೆ ನೀಡಿದೆ.

ಕೋವಿಡ್‌–19ನಿಂದ ತೀವ್ರತರವಾಗಿ ಬಳಲುತ್ತಿರುವವರ ತುರ್ತುಬಳಕೆಗಾಗಿ ರೆಮೆಡ್‌ಸಿವಿರ್ ಅನ್ನು ಬಳಸಲು ಅಮೆರಿಕ ಮೊದಲು ಅನುಮತಿ ನೀಡಿತ್ತು. ಇದೀಗ ಈ ಔಷಧಿ ಬಳಸಲು ಅನುಮತಿ ನೀಡಿದ ಎರಡನೇ ರಾಷ್ಟ್ರವಾಗಿದೆ.

‘ಕೆಲ ಅಪವಾದಗಳ ಹೊರತಾಗಿ ರೆಮೆಡ್‌ಸಿವಿರ್ ಅನ್ನು ಬಳಸಲು ಅನುಮೋದಿಸಲಾಗಿದೆ’ ಎಂದು ಜಪಾನ್ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕದ ಗಿಲ್ಯಾಡ್ ಸೈನ್ಸಸ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಪ್ರಾಯೋಗಿಕ ಔಷಧಿ ಬಳಕೆಗೆ ಶೀಘ್ರವೇ ಸರ್ಕಾರ ಹಸಿರು ನಿಶಾನೆ ನೀಡಲಿದೆ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಕಳೆದ ವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT