ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಕ್ಷಿಪಣಿ ದಾಳಿಯ ಬೆನ್ನಲ್ಲೇ ಬಾಗ್ದಾದ್‌ ಮೇಲೆ ಯುದ್ಧವಿಮಾನಗಳ ಹಾರಾಟ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಕ್ಷಿಪಣಿ ದಾಳಿಯ ವಿಡಿಯೊ
Last Updated 8 ಜನವರಿ 2020, 3:05 IST
ಅಕ್ಷರ ಗಾತ್ರ

ಬಾಗ್ದಾದ್: ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಸ್ವಲ್ಪ ಹೊತ್ತಿನ ನಂತರ, ಬುಧವಾರಇರಾಕ್ ರಾಜಧಾನಿ ಬಾಗ್ದಾದ್ ಆಗಸದಲ್ಲಿ ಕೆಳಮಟ್ಟದಲ್ಲಿಯೇ ಯುದ್ಧ ವಿಮಾನಗಳ ಹಾರಾಟ ಕಂಡುಬಂತು.

ಮೋಡದಿಂದ ಕೆಳಗೆ ಹಾರುತ್ತಿದ್ದ ಯುದ್ಧ ವಿಮಾನಗಳು ಯಾವ ದೇಶಕ್ಕೆ ಸೇರಿದವು ಎಂದು ಗುರುತಿಸಲು ಎಎಫ್‌ಪಿ ವರದಿಗಾರರಿಗೆ ಸಾಧ್ಯವಾಗಲಿಲ್ಲ. ಇರಾಕ್ ಆಡಳಿತ ಸಹ ಈ ಕುರಿತು ತುಟಿ ಬಿಚ್ಚಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡದಾಳಿ ವಿಡಿಯೊ

ಇರಾಕ್‌ನಲ್ಲಿನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ನಿಂದ ಹಾರಿಬಂದ ಕ್ಷಿಪಣಿಗಳು ಅಪ್ಪಳಿಸಿ ಸ್ಫೋಟಗೊಳ್ಳುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಅಮೆರಿಕ ಈವರೆಗೆ ಸಾವುನೋವಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಬೆಂಕಿಯುಂಡೆಯಂಥ ಕ್ಷಿಪಣಿಗಳು ಸೇನಾ ನೆಲೆಗಳಲ್ಲಿ ಸ್ಫೋಟಗೊಳ್ಳುವ ದೃಶ್ಯಗಳು ಮತ್ತು ಸುರಕ್ಷಿತ ಸ್ಥಳಗಳಿಗೆ ಜನರು,ಚೀರುವ ದನಿ ಭಾರಿ ಅನಾಹುತವೇ ಆಗಿರಬಹುದು ಎಂಬ ಶಂಕೆ ಹುಟ್ಟುಹಾಕಿದೆ.

ರಕ್ಷಣೆಗೆ ಕ್ರಮ ಎಂದ ಅಮೆರಿಕ ಸೇನೆ

ಇರಾನ್ ದಾಳಿ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಸೇನಾ ವಕ್ತಾರ ಅಲಿಸಾ ಫರಾ, ‘ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಸೇನಾ ಸಿಬ್ಬಂದಿ, ಸಹವರ್ತಿಗಳು ಮತ್ತು ಮಿತ್ರರನ್ನು ರಕ್ಷಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇವೆ. ’ ಎಂದು ಹೇಳಿದ್ದಾರೆ.

‘ಇರಾನ್ ಸರ್ಕಾರ ದಾಳಿ ನಡೆಸಬಹುದು ಎಂದು ಸುಲೇಮಾನಿ ಹತ್ಯೆಯ ನಂತರ ನಾವು ಅಂದಾಜಿಸಿದ್ದೆವು. ಈ ಸೇನಾ ನೆಲೆಗಳನ್ನು ಗರಿಷ್ಠ ಮಟ್ಟದ ಜಾಗೃತ ಸ್ಥಿತಿಯಲ್ಲಿ ಇರಿಸಲಾಗಿತ್ತು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT