ಮಂಗಳವಾರ, ಫೆಬ್ರವರಿ 18, 2020
16 °C

ಜೊಜಿಬಿನಿ ತುಂಜಿ ಮಿಸ್‌ ಯುನಿವರ್ಸ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಅಟ್ಲಾಂಟಾ: ‘ನಾನು ಬೆಳೆದ ಜಗತ್ತಿನಲ್ಲಿ, ನನ್ನ ಹಾಗೆ ಕಾಣುವ, ನನ್ನಂಥ ಚರ್ಮದ ಬಣ್ಣ ಮತ್ತು ಕೂದಲು ಇರುವ ಮಹಿಳೆಯನ್ನು ಸೌಂದರ್ಯವತಿಯರು ಎಂದು ಯಾರೂ ಪರಿಗಣಿಸುವುದಿಲ್ಲ. ಇದು ಇಲ್ಲಿಗೇ ನಿಂತು ಹೋಗಲಿದೆ ಎಂದು ನಾನು ಭಾವಿಸಿದ್ದೇನೆ’.

ಹೀಗೆ ಹೇಳಿದ್ದು, ದಕ್ಷಿಣ ಆಫ್ರಿಕಾದ 26 ವರ್ಷದ ಜೊಜಿಬಿನಿ ತುಂಜಿ. ಭಾನುವಾರ ಮಿಸ್‌ ಯುನಿವರ್ಸ್‌ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಇವರು ಮಿಸ್‌ ಸೌತ್‌ ಆಫ್ರಿಕಾ ಕೂಡ ಹೌದು. ತುಂಜಿ, ತಮ್ಮ ಮುಕ್ತಾಯ ಭಾಷಣದಲ್ಲಿ, ‘ಯುವತಿಯರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲು ಇಚ್ಛಿಸುತ್ತೇನೆ’ ಎಂದು ಹೇಳಿದಾಕ್ಷಣ ಸಭೆಯಲ್ಲಿದ್ದವರು ಚಪ್ಪಾಳೆಯ ಸುಳಿಮಳೆಗರೆದರು.

ಅಟ್ಲಾಂಟಾದ ಟೈಲರ್ ಪೆರ್ರಿ ಸ್ಟುಡಿಯೋಸ್‌ನಲ್ಲಿ ನಡೆದ 68ನೇ ಮಿಸ್‌ ಯುನಿವರ್ಸ್‌ ಸ್ಪರ್ಧೆಯಲ್ಲಿ ತುಂಜಿ, ವಿವಿಧ ದೇಶಗಳಿಂದ ಬಂದಿದ್ದ 90ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿ ಈ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಸ್ಪರ್ಧಿಗಳು ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಮಾತನಾಡಿದರು. ಏಳು ಮಂದಿ ಮಹಿಳಾ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು