ಭಾನುವಾರ, ಸೆಪ್ಟೆಂಬರ್ 15, 2019
27 °C

ರಾಜತಾಂತ್ರಿಕರ ಭೇಟಿ: ಜಾಧವ್‌ಗೆ ಇಂದು ಅವಕಾಶ

Published:
Updated:

ಇಸ್ಲಾಮಾಬಾದ್‌: ಗೂಢಚಾರಿಕೆ ಆರೋಪದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಅವರಿಗೆ ಸೋಮವಾರ (ಸೆ.2) ರಾಜತಾಂತ್ರಿಕರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಪಾಕಿಸ್ತಾನ ಭಾನುವಾರ ಘೋಷಿಸಿದೆ.

ವಿಯೆನ್ನಾ ಒಪ್ಪಂದ, ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಹಾಗೂ ಪಾಕಿಸ್ತಾನದ ಕಾನೂನಿಗೆ ಅನುಗುಣವಾಗಿ ರಾಜತಾಂತ್ರಿಕರ ಭೇಟಿಗೆ ಅನುವು ಮಾಡಿಕೊಡಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್‌ ಫೈಸಲ್‌ ಹೇಳಿದ್ದಾರೆ.

Post Comments (+)