ಶನಿವಾರ, ಏಪ್ರಿಲ್ 17, 2021
23 °C
ಅಲಿಪ್ತ ಕೂಟ ಸಂಪುಟ ಸಭೆ; ಜಾಗತಿಕ ಸಮಸ್ಯೆಗಳಿಗೆ ಸ್ಪಂದಿಸಲು ಪಾಕ್‌ಗೆ ಸಲಹೆ

ಕಾಶ್ಮೀರ ಪ್ರಸ್ತಾಪಕ್ಕೆ ಭಾರತ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಅಲಿಪ್ತ ಕೂಟದ (ಎನ್‌ಎಎಮ್‌) ದೇಶಗಳ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾ‍ಪಿಸಿದ ಪಾಕಿಸ್ತಾನ ನಿಲುವಿಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. 

ವೆನಿಜುವೆಲ ರಾಜಧಾನಿ ಕಾರಕಸ್‌ನಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಂಪುಟ ಸಭೆಯಲ್ಲಿ ಪಾಕ್‌ನ ಈ ನಡೆಯನ್ನು ಭಾರತ ಖಂಡಿಸಿದೆ. ಇದು ‘ಸ್ವಹಿತಾಸಕ್ತಿಯ ಧೋರಣೆ’ ಆಗಿದ್ದು, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ‘ಗಾಳಿ ಹಿಡಿಯುವ ಸಾಹಸಕ್ಕೆ’ ಮುಂದಾಗಿದೆ ಎಂದು ಜರಿದಿದೆ. 

ಜವಾಬ್ದಾರಿಯುತವಾಗಿ ವರ್ತಿಸಬೇಕಾದ ದೇಶ ಒಕ್ಕೂಟದ ಆಶಯಗಳನ್ನು ಉಲ್ಲಂಘಿಸಿ ಪ್ರಾದೇಶಿಕ ಸಮಸ್ಯೆಯನ್ನು ಮುನ್ನಲೆಗೆ ತರುತ್ತಿದೆ. ಭಯೋತ್ಪಾದನೆ, ಹವಾಮಾನ ವೈಪರೀತ್ಯ ಸಮಸ್ಯೆಗಳನ್ನು ಜಗತ್ತು ಎದುರಿಸುತ್ತಿದೆ. ಇವುಗಳ ಬಗ್ಗೆ ಅದು ಗಮನ ಹರಿಸಲಿ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್‌ ಪಾಕ್‌ ಹೆಸರೆತ್ತದೆ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು