ಮಂಗಳವಾರ, ಸೆಪ್ಟೆಂಬರ್ 22, 2020
25 °C

2019ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Nobel Prize in Physics

ಸ್ಟಾಕ್‌ಹೋಮ್: 2019ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಿಸಿದ್ದು, ಜೇಮ್ಸ್ ಪೀಬ್‌ಲೆಸ್, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲಾಜ್ ಎಂಬ ಮೂವರು ವಿಜ್ಞಾನಿಗಳು  ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ಖಗೋಲ ವಿಜ್ಞಾನದಲ್ಲಿ ಮಹತ್ತರ ಕಾರ್ಯ ಮಾಡಿದ್ದಕ್ಕಾಗಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿ ಮಂಗಳವಾರ ಹೇಳಿದೆ.

ಪ್ರಶಸ್ತಿಯ ಅರ್ಧ ಭಾಗ ಪೀಬ್‌ಲೆಸ್ ಅವರಿಗೆ ನೀಡಲಾಗುತ್ತಿದ್ದು ಉಳಿದರ್ಧ ಭಾಗ ಮೇಯರ್ ಮತ್ತು ಕ್ವೆಲಾಜ್ ಹಂಚಿಕೊಳ್ಳಲಿದ್ದಾರೆ.  ಪ್ರಶಸ್ತಿ ಮೊತ್ತ 910,000 ಡಾಲರ್ ( ಅಂದಾಜು ₹64 ದಶಲಕ್ಷ) ಆಗಿದೆ.

ಈ ವರ್ಷದ ಪ್ರಶಸ್ತಿ ವಿಜೇತರು ನಮ್ಮ ಬ್ರಹ್ಮಾಂಡದ ಬಗ್ಗೆ ನಮ್ಮ ಆಶಯಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ . ಬಿಗ್ ಬ್ಯಾಂಗ್‌ ನಂತರ ನಮ್ಮ ಜಗತ್ತು ಹೇಗೆ ರೂಪುಗೊಂಡಿತು ಎಂಬುದರ  ಬಗ್ಗೆ ಸೈದ್ಧಾಂತಿಕ ಸಂಶೋಧನೆ ನಡೆಸಿದ್ದಾರೆ ಜೇಮ್ಸ್. ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲಾಜ್ ಅವರು ಅನಾಮಿಕ ಗ್ರಹಗಳ ಹುಡುಕಾಟಕ್ಕಾಗಿ  ಬ್ರಹ್ಮಾಂಡವನ್ನು ಮತ್ತಷ್ಟು ಅಧ್ಯಯನ ಮಾಡಿದರು. ಅವರ ಸಂಶೋಧನೆಗಳು ಜಗತ್ತಿನ ಕಲ್ಪನೆಯನ್ನೇ ಬದಲಾಯಿಸಿತು ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸಯನ್ಸ್  ಹೇಳಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು